ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಮೂಲದ ಎಲ್‌ಇಟಿ ಕಮಾಂಡರ್‌ನ ಆಸ್ತಿ ಜಪ್ತಿ

Last Updated 17 ಡಿಸೆಂಬರ್ 2022, 14:03 IST
ಅಕ್ಷರ ಗಾತ್ರ

ಭದೇರ್ವಾ, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ತಲೆಮರೆಸಿಕೊಂಡಿದ್ದ ಪಾಕ್ ಮೂಲದ ಲಷ್ಕರ್‌ –ಇ–ತೈಯಬಾ ಸಂಘಟನೆಯ ಕಮಾಂಡರ್‌ ಅಬ್ದುಲ್‌ ರಶಿದ್‌ ಅಲಿಯಾಸ್‌ ಜೆಹಾಂಗೀರ್‌ಗೆ ಸೇರಿದ ಆಸ್ತಿಯನ್ನು ದೋಡಾ ಪ್ರದೇಶದಲ್ಲಿ ಜಮ್ಮು– ಕಾಶ್ಮೀರ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದನೆಯನ್ನು ನಡೆಸಲು ಈತ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೋಡಾ ಜಿಲ್ಲೆಯ ಥಾತ್ರಿ ಬಳಿಯ ಖಾನ್ಪುರ ಹಳ್ಳಿಯಲ್ಲಿ ನಾಲ್ಕು ಕನಾಲ್‌ (2023.24 ಚದರ ಮೀಟರ್‌) ಅಳತೆಯ ಜಾಗವನ್ನು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡ ಮುಟ್ಟುಗೋಲು ಹಾಕಿಕೊಂಡಿದೆ.

1993ರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಬಂದ ಈತ ಐಇಡಿ ಸ್ಫೋಟ, ಶಸ್ತ್ರಾಸ್ತಗಳ ಕಳ್ಳಸಾಗಾಣಿಕೆ ಸೇರಿದಂತೆ ಅನೇಕ ವಿಧ್ವಂಸಕ ಕೃತ್ಯಗಳಿಗೆ ಮಾಸ್ಟರ್‌ ಮೈಂಡ್‌ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT