ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮುನಾ ನದಿಯಲ್ಲಿ ಅಮೋನಿಯಾ ಹೆಚ್ಚಳ: ದೆಹಲಿಗೆ ಜಲಗಂಡ!

Last Updated 7 ನವೆಂಬರ್ 2021, 3:27 IST
ಅಕ್ಷರ ಗಾತ್ರ

ದೆಹಲಿ: ಯಮುನಾ ನದಿಯಲ್ಲಿ ಅಮೋನಿಯಾ ಸ್ವೀಕಾರಾರ್ಹ ಮಟ್ಟಕ್ಕಿಂತಲೂ ಅಧಿಕವಾಗಿದ್ದು, ರಾಷ್ಟ್ರ ರಾಜಧಾನಿಗೆ ನೀರಿನ ಬವಣೆ ಎದುರಾಗುವ ಸಾಧ್ಯತೆಗಳಿವೆ. ಸದ್ಯ ಯಮುನೆಯಲ್ಲಿ ಅಮೋನಿಯಾ 0.5 ಪಿಪಿಎಂ ಅನ್ನೂ ದಾಟಿದೆ.

ಪಿಪಿಎಂ ಎಂಬುದು "ಪಾರ್ಟ್ಸ್ ಪರ್ ಮಿಲಿಯನ್" ಎಂಬುದಕ್ಕೆ ಸಂಕ್ಷೇಪಣವಾಗಿದೆ. ಪ್ರತಿ ಯೂನಿಟ್ ನೀರಿಗೆ ಸೇರಿರುವ ರಾಸಾಯನಿಕ ಅಥವಾ ಕಲುಷಿತ ದ್ರವ್ಯರಾಶಿಯನ್ನು ಅಂದಾಜು ಮಾಡಲು ಈ ಮಾಪನವನ್ನು ಬಳಸಲಾಗುತ್ತದೆ.

ಯಮುನಾದಲ್ಲಿ ಅಮೋನಿಯಾ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತಿದೆ. ನೀರಿನಲ್ಲಿ ಅಮೋನಿಯಾ ಪ್ರಮಾಣ ಹೆಚ್ಚಾದರೆ, ಜಲಚರಗಳಿಗೆ ತೊಂದರೆಯಾಗುತ್ತದೆ. ರಕ್ತದಲ್ಲಿ ವಿಷದ ರಚನೆಗೆ ಕಾರಣವಾಗುತ್ತದೆ. ಅಂತಿಮವಾಗಿ ಅವು ಸಾವಿಗೀಡಾಗುತ್ತವೆ.

ನದಿಯಲ್ಲಿನ ಅಮೋನಿಯಾದ ಕಾರಣ, ಭಾನುವಾರ ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ನಾಲ್ಕು ಪ್ರಮುಖ ನೀರು ಸಂಸ್ಕರಣಾ ಘಟಕಗಳಾದ ಸೋನಿಯಾ ವಿಹಾರ್, ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾಗಳಲ್ಲಿ ನೀರಿನ ಉತ್ಪಾದನೆಗೆ ಹೊಡೆತ ಬಿದ್ದಿದೆ ಎಂದು ಗೊತ್ತಾಗಿದೆ.

‘ಭಾನುವಾರ ಬೆಳಿಗ್ಗೆ ಮತ್ತು ಸಂಜೆ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ. ಅಮೋನಿಯಾ ಮಾಲಿನ್ಯದ ಹೆಚ್ಚಳ ಮತ್ತು ಯಮುನಾದಲ್ಲಿನ ಹೆಚ್ಚಿನ ಪಾಚಿಯಿಂದಾಗಿ ನೀರಿನ ಬಿಕ್ಕಟ್ಟು ಉಂಟಾಗಿದೆ,’ ಎಂದು ದೆಹಲಿ ಜಲ ಮಂಡಳಿ (ಡಿಜೆಬಿ) ಹೇಳಿಕೆಯಲ್ಲಿ ತಿಳಿಸಿದೆ.

ವಜೀರಾಬಾದ್ ಕೆರೆ ನೀರನ್ನು ಸಂಸ್ಕರಣೆ ಮಾಡಿ ಮಧ್ಯ ದೆಹಲಿ, ದಕ್ಷಿಣ ಮತ್ತು ಪಶ್ಚಿಮ ದೆಹಲಿಗೆ ಸರಬರಾಜು ಮಾಡಲಾಗುತ್ತದೆ. ಕೆರೆ ನೀರನ್ನು ವಜೀರಾಬಾದ್, ಓಖ್ಲಾ ಮತ್ತು ಚಂದ್ರವಾಲ್ ಸಂಸ್ಕರಣಾ ಘಟಕಗಳಿಗೆ ಹಾಯಿಸಲಾಗಿದ್ದು, ಅಲ್ಲಿ ಸಂಸ್ಕರಣೆ ಮಾಡಲಾಗುತ್ತದೆ.

ಯಮುನೆಯಲ್ಲಿ ಶನಿವಾರ ಅಮೋನಿಯಾ ಮಟ್ಟವು ಪ್ರತಿ ಮಿಲಿಯನ್‌ಗೆ ಸುಮಾರು 2.2 ರಷ್ಟಿತ್ತು ಎಂದು ದೆಹಲಿ ಜಲ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT