ಶನಿವಾರ, ಸೆಪ್ಟೆಂಬರ್ 24, 2022
21 °C

ನಿರಪರಾಧಿಯಾಗಿದ್ದರೆ ಭಯವೇಕೆ? - ಏಕನಾಥ ಶಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ‘ಯಾವ ಅಕ್ರಮವನ್ನೂ ಎಸಗಿಲ್ಲ ಎಂದು ರಾವುತ್‌ ಘೋಷಿಸಿಕೊಂಡಿದ್ದಾರೆ. ಅವರು ನಿರಪರಾಧಿಯೇ ಆಗಿದ್ದರೆ ತನಿಖೆಗೆ ಏಕೆ ಹೆದರುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಔರಂಗಾಬಾದ್‌ನಲ್ಲಿ ಹೇಳಿದ್ದಾರೆ.

ರಾವುತ್‌ ಅವರು ಮಾಡಿರುವ ಟ್ವೀಟ್‌ ಉಲ್ಲೇಖಿಸಿ ಮಹಾರಾಷ್ಟ್ರ ಬಿಜೆಪಿಯ ಹಲವು ನಾಯಕರೂ ಹೇಳಿಕೆ ನೀಡಿದ್ದಾರೆ. ‘ಸಂಜಯ್‌ ರಾವುತ್‌ ಅವರು ಅನಗತ್ಯವಾಗಿ ಬಾಳಾಸಾಹೇಬ್‌ ಠಾಕ್ರೆ ಅವರ ಹೆಸರನ್ನು ಮಧ್ಯ ತರುತ್ತಿದ್ದಾರೆ ಮತ್ತು ಸೇನಾ ಕಾರ್ಯಕರ್ತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ಅವರು ಯಾವುದಕ್ಕೂ ಹೆದರಬಾರದು. ಸರ್ಕಾರ ಮತ್ತು ನ್ಯಾಯಾಂಗದ ಮೇಲೆ ಜನರು ವಿಶ್ವಾಸ ಇರಿಸಬೇಕು’ ಎಂದು ಮಹಾರಾಷ್ಟ್ರ ಮಾಜಿ ಸಚಿವ ಗಿರೀಶ್‌ ಮಹಾಜನ್‌ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು