ಶನಿವಾರ, ಜೂನ್ 25, 2022
21 °C

ಉತ್ತರಾಖಂಡದಲ್ಲಿ ಭಾರಿ ಹಿಮಪಾತ: 12 ಜನರನ್ನು ರಕ್ಷಿಸಿದ ಎಸ್‌ಡಿಆರ್‌ಎಫ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಉತ್ತರಕಾಶಿ: ಉತ್ತರಾಖಂಡದ ಬಾರ್ಕೊಟ್‌ ಪಟ್ಟಣದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 12 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಗುರುವಾರ ರಕ್ಷಿಸಿದೆ.

‘ಉತ್ತರಕಾಶಿ ಜಿಲ್ಲೆಯ ಬಾರ್ಕೊಟ್‌ ಪಟ್ಟಣದ ರಸ್ತೆಯಲ್ಲಿ ಭಾರಿ ಹಿಮಪಾತ ಸಂಭವಿಸಿದ್ದ ಕಾರಣ 3–4 ವಾಹನಗಳು ಮತ್ತು 12 ಜನರು ಸಿಲುಕಿದ್ದರು. ಹಿಮಪಾತದಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಸ್‌ಡಿಆರ್‌ಎಫ್‌ ಮಾಹಿತಿ ನೀಡಿದೆ.

ಸದ್ಯ ರಕ್ಷಿಸಲಾಗಿರುವ 12 ಜನರು ಮದುವೆ ಸಮಾರಂಭದ ಸಲುವಾಗಿ ಅಗೋಡಾದಿಂದ ಓಜ್ರಿಗೆ ತೆರಳುತ್ತಿದ್ದರು ಎಂದೂ ಎಸ್‌ಡಿಆರ್‌ಎಫ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು