ಬುಧವಾರ, ಮಾರ್ಚ್ 22, 2023
22 °C

ನಾಚಿಕೆಯಾಗಬೇಕು: ಹರಿಯಾಣ ಬಿಜೆಪಿ ನಾಯಕನ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂದು ಬೆಳಿಗ್ಗೆ ತಮ್ಮ 98ನೇ ವಯಸ್ಸಿಗೆ ನಿಧನರಾದ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ನೆಪದಲ್ಲಿ ಟೀಕಿಸಿದ ನಂತರ ಹರಿಯಾಣ ಬಿಜೆಪಿಯ ಸೋಷಿಯಲ್ ಮೀಡಿಯಾ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅರುಣ್ ಯಾದವ್ ವಿರುದ್ಧ ಶಿವಸೇನೆ ನಾಯಕಿ ಊರ್ಮಿಳಾ ಮಾತೋಂಡ್ಕರ್‌ ವಾಗ್ದಾಳಿ ನಡೆಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಅರುಣ್ ಯಾದವ್, 'ಚಲನಚಿತ್ರ ಜಗತ್ತಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಣ ಸಂಪಾದಿಸಿದ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್) ಅವರ ಸಾವು ಭಾರತೀಯ ಚಲನಚಿತ್ರೋದ್ಯಮಕ್ಕೆ ಭರಿಸಲಾಗದ ನಷ್ಟವಾಗಿದೆ! ದುಃಖಿತ ಕುಟುಂಬಕ್ಕೆ ಸಂತಾಪಗಳು!' ಎಂದಿದ್ದರು.

2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ಜನಪ್ರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಅವರು, ಮೂರೇ ಮೂರು ಪದಗಳ ಟ್ವೀಟ್ ಮೂಲಕ ಅರುಣ್ ಯಾದವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

'ನಿಮಗೆ ನಾಚಿಕೆಯಾಗಬೇಕು' ಎಂದು 'ಥಂಬ್ಸ್ ಡೌನ್' ಎಮೋಜಿಯೊಂದಿಗೆ ಕಮೆಂಟ್ ಮಾಡಿದ್ದಾರೆ.

ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಮತ್ತು ಚಿತ್ರರಂಗದ ಅನೇಕರಿಗೆ ಸ್ಫೂರ್ತಿಯಾದ ದಿಲೀಪ್ ಕುಮಾರ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮುಂಬೈನಲ್ಲಿ ಬುಧವಾರ (ಜು.7) ನಿಧನರಾಗಿದ್ದಾರೆ. ಈ ವಿಚಾರವನ್ನು ಅವರ ಆಪ್ತ ಫೈಸಲ್ ಪಾರೂಖ್ ಎನ್ನುವವರು ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯ ಮೂಲಕವೇ ತಿಳಿಸಿದ್ದರು.

ಮೊಹಮ್ಮದ್ ಯೂಸುಫ್ ಖಾನ್ ಅವರು 1922ರ ಡಿಸೆಂಬರ್‌ನಲ್ಲಿ ಪೇಶಾವರದಲ್ಲಿ (ಆಗ ಇದು ಉಪಖಂಡದ ಬ್ರಿಟಿಷ್ ಪ್ರಾಂತ್ಯಗಳ ಭಾಗವಾಗಿತ್ತು) ಜನಿಸಿದರು. ತಮ್ಮ ಮೊದಲ ಚಿತ್ರ 1944ರ 'ಜ್ವಾರ್ ಬಟ್ಟಾ'ದಲ್ಲಿ ನಟಿಸುವ ಮೊದಲು ದಿಲೀಪ್ ಕುಮಾರ್ ಎಂಬ ಹೆಸರನ್ನು ಪಡೆದರು. ಈ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಸದ್ದು ಮಾಡದೆ ಹೋಯಿತು.

ದಿಲೀಪ್ ಕುಮಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು