ಮಂಗಳವಾರ, ಅಕ್ಟೋಬರ್ 27, 2020
19 °C

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ಶಿರೋಮಣಿ ಅಕಾಲಿ ದಳ ನಿರ್ಧಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶಿರೋಮಣಿ ಅಕಾಲಿ ದಳದ ಸಭೆ–ಎಎನ್‌ಐ ಚಿತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಿರ್ಧರಿಸಿದೆ.

ಕೃಷಿ ಮಸೂದೆಗೆ ಶಿರೋಮಣಿ ಅಕಾಲಿ ದಳ ವಿರೋಧ ವ್ಯಕ್ತಪಡಿಸಿದ್ದು, ಅದೇ ವಿಚಾರವಾಗಿ ಪಕ್ಷದ ನಾಯಕಿ ಹರ್ಸಿಮ್ರತ್‌ ಕೌರ್‌ ಕೇಂದ್ರ ಸಚಿವ ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದರು.

ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿರುವುದಾಗಿ ಪಕ್ಷದ ಅಧ್ಯಕ್ಷ ಸುಖ್ಬಿರ್‌ ಸಿಂಗ್‌ ಬಾದಲ್‌ ಶನಿವಾರ ಹೇಳಿದ್ದಾರೆ. ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಒಮ್ಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ರೈತರ ಬೆಳೆ ಕನಿಷ್ಠ ಬೆಂಬಲ ಬೆಲೆ ನಿಗದಿಯ ಬಗ್ಗೆ ಕೇಂದ್ರ ಸರ್ಕಾರ ಖಾತರಿ ನೀಡದಿರುವುದು ಹಾಗೂ ಪಂಜಾಬ್‌ ಮತ್ತು ಸಿಖ್‌ ಸಂಬಂಧಿತ ವಿಚಾರಗಳಲ್ಲಿ ಸೂಕ್ತ ಪ್ರತಿಕ್ರಿಯೆ ತೋರದ ಕಾರಣಗಳಿಂದಾಗಿ ಶಿರೋಮಣಿ ಅಕಾಲಿ ದಳ ಈ ನಿರ್ಧಾರ ಕೈಗೊಂಡಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಶಿವಸೇನಾ ಮತ್ತು ಟಿಡಿಪಿ ನಂತರ ಎನ್‌ಡಿಎ ಕೂಟದಿಂದ ಹೊರ ಬರುತ್ತಿರುವ ಪ್ರಮುಖ ಪಕ್ಷ ಎಸ್‌ಎಡಿ. ಇದು ಬಿಜೆಪಿಯ ಅತ್ಯಂತ ಹಳೆಯ ಮೈತ್ರಿ ಪಕ್ಷವೂ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು