ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾಗೆ ಅಹಮದಾಬಾದ್‌ ಬಗ್ಗೆ ಮಾತನಾಡುವ ಧೈರ್ಯ ಇದೆಯೇ: ರಾವುತ್‌ ಪ್ರಶ್ನೆ

Last Updated 6 ಸೆಪ್ಟೆಂಬರ್ 2020, 6:09 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರವನ್ನು ಮಿನಿ ಪಾಕಿಸ್ತಾನ ಎಂದಿರುವ ನಟಿ ಕಂಗನಾ ರನೌತ್‌ಗೆ ಅಹಮದಾಬಾದ್‌ನ ಬಗ್ಗೆ ಮಾತನಾಡುವ ಧೈರ್ಯ ಇದೆಯೇ? ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ಮುಂಬೈ ಪೊಲೀಸರನ್ನೂ ಟ್ವೀಟ್‌ ಮೂಲಕ ಟೀಕಿಸಿದ್ದರು.

ಕಂಗನಾ ಹೇಳಿಕೆ ಕುರಿತುಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಸಂಜಯ್‌ ರಾವತ್‌ ಕಂಗನಾಳನ್ನು ಹರಾಮ್‌ಕೋರ್‌ ಲಡಕಿ ಎಂದು ಕರೆದಿದ್ದರು.

ಸಂಜಯ್‌ ಸಂಜಯ್ ರಾವುತ್‌ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಮೊದಲು ಆ ಹುಡುಗಿ (ನಟಿ ಕಂಗನಾ ರನೌತ್‌) ಮಹಾರಾಷ್ಟ್ರದ ಜನತೆಗೆ ಕ್ಷಮೆಯಾಚಿಸಿದರೆ, ನಾನು ಕೂಡ ಕ್ಷಮೆ ಕೋರುವ ಬಗ್ಗೆ ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT