ಸೋಮವಾರ, ಜೂನ್ 21, 2021
29 °C
ಎನ್‌ಸಿಬಿ ಕಾರ್ಯಾಚರಣೆ

ಸುಶಾಂತ್ ಸಿಂಗ್ ಪ್ರಕರಣ: ಗೋವಾದಲ್ಲಿ ಡ್ರಗ್ಸ್‌ ಪೆಡ್ಲರ್ ಬಂಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿಗೆ ತಳಕು ಹಾಕಿಕೊಂಡಿರುವ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಅಧಿಕಾರಿಗಳು ಗೋವಾದಲ್ಲಿ ಡ್ರಗ್ಸ್‌ ಪೆಡ್ಲರ್‌ ಒಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಹೇಮಾಲ್ ಷಾ ಎಂದು ಗುರುತಿಸಲಾಗಿದೆ.

‘ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆ ನಡೆಸುವ ವೇಳೆ ಹೇಮಾಲ್ ಷಾ ಹೆಸರು ಕೇಳಿಬಂದಿತ್ತು‘ ಎಂದು ಅವರು ಹೇಳಿದರು.

ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ ಅಧಿಕಾರಿಗಳು ಗೋವಾದಲ್ಲಿ ಷಾನನ್ನು ಬಂಧಿಸಿದರು. ಬಂಧಿತ ಷಾನನ್ನು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಮುಂಬೈನಲ್ಲಿ ನಟ ಸುಶಾಂತ್ ಸಿಂಗ್ ಸಾವಿನ ನಂತರ, ಸಿನಿಮಾ ಮತ್ತು ಮನರಂಜನಾ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ನಂತರ ಎನ್‌ಸಿಬಿ ತನಿಖೆ ಆರಂಭಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು