ಬುಧವಾರ, ಮಾರ್ಚ್ 3, 2021
29 °C

‘ತಾಂಡವ್‌’ ವೆಬ್‌ ಸರಣಿಯಲ್ಲಿ ಬದಲಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡಿದ ಆರೋಪದಡಿ ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ ‘ತಾಂಡವ್‌’ ಹೆಸರಿನ ವೆಬ್‌ ಸರಣಿ ಚಿತ್ರದ ವಿರುದ್ಧ ಹಲವೆಡೆ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ, ಚಿತ್ರದಲ್ಲಿ ಬದಲಾವಣೆ ತರುವುದಾಗಿ ತಂಡವು ಮಂಗಳವಾರ ತಿಳಿಸಿದೆ. 

‘ಶಿವ’ ಹೆಸರಿನ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟ ಜೀಶಾನ್‌ ಅಯೂಬ್‌, ಶಿವನ ಪಾತ್ರದಲ್ಲಿ ನಟಿಸಿರುವ ದೃಶ್ಯವು ಸಾಕಷ್ಟು ವಿವಾದಕ್ಕೆ ಒಳಗಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ತಂಡವು, ‘ದೇಶದ ಜನರ ಭಾವನೆಗಳ ಬಗ್ಗೆ ನಮಗೆ ಗೌರವವಿದೆ. ವೆಬ್‌ ಸರಣಿಯಲ್ಲಿ ಬದಲಾವಣೆಯನ್ನು ಅನುಷ್ಠಾನಕ್ಕೆ ತರಲು ತಂಡವು ನಿರ್ಧರಿಸಿದೆ’ ಎಂದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು