ಶುಕ್ರವಾರ, ಅಕ್ಟೋಬರ್ 7, 2022
28 °C

ಐಸಿಜಿಯ ಡಾರ್ನಿಯರ್‌ ವಿಮಾನದ ಟೈರ್‌ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಗೋವಾದ ಡಾಬೊಲಿಮ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯ (ಐಸಿಜಿ) ಡಾರ್ನಿಯರ್‌ ವಿಮಾನದ ಟೈರ್‌ ಸ್ಫೋಟವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ ಈ ಅವಘಡ ನಡೆದಿದ್ದು, ಇದರಿಂದ ಹಲವು ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬ ಆಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

ಐಎನ್‌ಎಸ್ ಹನ್ಸಾ ನೌಕಾ ನೆಲೆಯಿಂದ ಕಾರ್ಯಾಚರಿಸುವ ಕರಾವಳಿ ರಕ್ಷಣಾ ಪಡೆಯು, ದಾಬೊಲಿಮ್ ನಾಗರಿಕ ವಿಮಾನ ನಿಲ್ದಾಣವನ್ನೂ ಬಳಸಿಕೊಳ್ಳುತ್ತದೆ.  ‘ನಿಯಮಿತ ಪರೀಕ್ಷೆ ನಡೆಸುತ್ತಿದ್ದಾಗ ವಿಮಾನದ ಟೈರ್‌ ಸ್ಫೋಟಗೊಂಡಿದೆ. ರನ್‌ವೇನಿಂದ ವಿಮಾನವನ್ನು ತೆರವು ಮಾಡಲಾಗಿದೆ’ ಎಂದು ಐಸಿಜಿಯ ಡಿಐಸಿ ಅರುನಾಭ್‌ ಬೋಸ್ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು