ನವದೆಹಲಿ: ಪ್ರತಿಭಟನಾ ನಿರತ ರೈತರ ಉಳಿದ ಬೇಡಿಕೆಗಳ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಚಿಸಿರುವ ಐವರು ಸದಸ್ಯರನ್ನೊಳಗೊಂಡ ಸಮಿತಿಯು, ಈ ವಿಚಾರವಾಗಿ ರೈತ ಸಂಘಟನೆಗಳು ಆಶಾದಾಯಕವಾಗಿವೆ ಎಂದು ಬುಧವಾರ ಹೇಳಿದೆ.

ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ನಾಯಕ ಯಧುವೀರ್ ಸಿಂಗ್, 'ಕೇಂದ್ರದಿಂದ ಬಂದಿರುವ ಹೊಸ ಪ್ರಸ್ತಾವನೆಯ ಬಗ್ಗೆ ಚರ್ಚಿಸಿರುವುದಾಗಿ' ತಿಳಿಸಿದ್ದಾರೆ.

'ಸಿಂಘು ಗಡಿಯಲ್ಲಿ ನಡೆದ ಎಸ್‌ಕೆಎಂ ಸಭೆಯಲ್ಲಿ ಸರ್ಕಾರದ ಕಡೆಯಿಂದ ಬಂದಿರುವ ಹೊಸ ಪ್ರಸ್ತಾವನೆ ಕುರಿತು ಚರ್ಚೆ ಕೈಗೆತ್ತಿಕೊಳ್ಳಲಾಯಿತು' ಎಂದು ಮತ್ತೊಬ್ಬ ರೈತ ನಾಯಕ ಗುರ್ನಾಮ್ ಸಿಂಗ್ ಚಂದುನಿ ತಿಳಿಸಿದ್ದಾರೆ.

ಸರ್ಕಾರವು ಹೊಸ ಪ್ರಸ್ತಾವನೆಯನ್ನಿಟ್ಟಿರುವ ಅಂಗವಾಗಿ ಪ್ರತಿಭಟನಾ ನಿರತ ರೈತರು ಪ್ರತಿಭಟನೆ ಕೊನೆಗೊಳಿಸಬೇಕೇ ಎನ್ನುವ ಕುರಿತು ನಿರ್ಧರಿಸಲು ಸಿಂಘು ಗಡಿಯಲ್ಲಿ ಎಸ್‌ಕೆಎಂ ನಿರ್ಣಾಯಕ ಸಭೆಯನ್ನು ಕೈಗೊಂಡಿತ್ತು.

ರೈತರ ಮೇಲಿನ ನಕಲಿ ಪ್ರಕರಣಗಳನ್ನು ಹಿಂಪಡೆಯಲು ಪ್ರಸ್ತಾವನೆಯಲ್ಲಿ ನಿಗದಿಪಡಿಸಿರುವ ಪೂರ್ವಭಾವಿ ಷರತ್ತು ಸೇರಿದಂತೆ ಸರ್ಕಾರದ ಹೊಸ ಪ್ರಸ್ತಾವನೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟನೆ ನೀಡುವಂತೆ ಮಂಗಳವಾರವಷ್ಟೇ ಎಸ್‌ಕೆಎಂ ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.