ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಾರಾಂತ್ಯದ‌ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ: ಜನ‌‌‌ ಸಂಚಾರಕ್ಕೆ ನಿರ್ಬಂಧ

Last Updated 17 ಏಪ್ರಿಲ್ 2021, 6:48 IST
ಅಕ್ಷರ ಗಾತ್ರ

ನವದೆಹಲಿ: ದಿನೇದಿನೇ ಅಧಿಕ‌ ಪ್ರಮಾಣದಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಯ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ‌ ವಾರಾಂತ್ಯದ ಕರ್ಫ್ಯೂ ಘೋಷಿಸಿದ್ದರಿಂದ ಶನಿವಾರ ಸಾರ್ವಜನಿಕರ 'ಮುಕ್ತ ಸಂಚಾರ' ದಿಂದ ರಾಷ್ಷ್ರ ರಾಜಧಾನಿ ಮುಕ್ತವಾಗಿತ್ತು.

ಅಗತ್ಯ ಸೇವೆಗಳಿಗೆ‌ ಸಂಬಂಧಿಸಿದಂತೆ ಔಷಧಿ ಅಂಗಡಿಗಳು, ಕಿರಾಣಿ ಅಂಗಡಿಗಳ ಬಾಗಿಲು ತೆರೆದಿದೆ. ತರಕಾರಿ, ಹಾಲು ಮಾರಾಟಗಾರರಿಗೆ ಯಾವುದೇ ನಿರ್ಬಂಧ‌ ಹೇರಲಾಗಿಲ್ಲ.

ಎಲ್ಲ ರೀತಿಯ ಮಾರುಕಟ್ಟೆಗಳು, ಮಾಲ್ ಗಳು, ಸ್ಪಾಗಳು, ಹೋಟೆಲ್, ರೆಸ್ಟೋರಂಟ್ ಗಳಿಗೆ ನಿರ್ಬಂಧ‌ ಹೇರಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಉಳಿಯುವಂತಾಗಿದೆ.

ರೈಲು ನಿಲ್ದಾಣ, ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ತೆರಳುವವರು, ಬೇರೆ ಕಡೆಯಿಂದ ನಗರಕ್ಕೆ‌ ಬರುವವರಿಗಾಗಿ ಬಸ್, ಆಟೊ, ಟ್ಯಾಕ್ಸಿ ಸೇವೆ ನಿರಾತಂಕವಾಗಿದೆ.

ವಾರಾಂತ್ಯದ‌ ಕರ್ಫ್ಯೂ ಘೋಷಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿನ ರಾಜೀವ್ ಚೌಕ್ ರಸ್ತೆ‌ ಬಿಕೋ ಎನ್ನುತ್ತಿರುವುದು
ವಾರಾಂತ್ಯದ‌ ಕರ್ಫ್ಯೂ ಘೋಷಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿನ ರಾಜೀವ್ ಚೌಕ್ ರಸ್ತೆ‌ ಬಿಕೋ ಎನ್ನುತ್ತಿರುವುದು

ಕರ್ಫ್ಯೂ‌ ಹಿನ್ನೆಲೆಯಲ್ಲಿ ಜನರು ಮನೆಗಳಲ್ಲೇ ಇರುವುದರಿಂದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಕನಾಟ್‌ ಪ್ಲೇಸ್, ಕರೋಲ್ ಬಾಗ್, ಸರೋಜಿನಿ ಮಾರುಕಟ್ಟೆ, ನೆಹರೂ ಪ್ಲೇಸ್ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳು ಜನಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು.

ವಾರಾಂತ್ಯದ‌ ಕ್ರೀಡಾಕೂಟಗಳು, ಮೋಜು, ಮಸ್ತಿಗೆ‌ ಹೆಸರಾಗಿರುವ ನಗರದಲ್ಲಿ ಕರ್ಫ್ಯೂ ಹೇರಿದ್ದರಿಂದ ಗುಂಪುಗೂಡುವಿಕೆಗೆ ಕಡಿವಾಣ ಬಿದ್ದಂತಾಗಿದೆ.

ನಗರದಾದ್ಯಂತ ಪೊಲೀಸ್ ಹಾಗೂ ಅರೆ ಸೇನಾಪಡೆ ಸಿಬ್ಬಂದಿ ಅನಗತ್ಯವಾಗಿ ಮನೆಯಿಂದ ಹೊರಬಂದು ಕರ್ಫ್ಯೂ ನಿಯಮ ಉಲ್ಲಂಘಿಸುವವರ ತಪಾಸಣೆ ನಡೆಸಿ, ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದರು.

ವಾರಂತ್ಯಕ್ಕೆ ಜನಜಂಗುಳಿಯಿಂದ ಕೂಡಿರುತ್ತಿದ್ದ ಇಂಡಿಯಾ ಗೇಟ್ ಪ್ರದೇಶದಲ್ಲಿ ಜನಸಂಚಾರವೇ ಇರಲಿಲ್ಲ. ವಾಹನ ಸಂಚಾರವೂ ವಿರಳವಾಗಿದ್ದು ಕಂಡುಬಂತು.

ಕಳೆದ ಒಂದು ವಾರದಿಂದ ನಗರದಲ್ಲಿ ರಾತ್ರಿ ಕರ್ಫ್ಯೂ ಹೇರಲಾಗುತ್ತಿದ್ದು, ಭಾನುವಾರ ಹಗಲಿನಲ್ಲೂ ವಾರಾಂತ್ಯದ ಕರ್ಫ್ಯೂ‌ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT