ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಬಯಸಿದರೆ, ರಾಜಕೀಯ ಪ್ರವೇಶ: ರಾಬರ್ಟ್‌ ವಾದ್ರಾ

Last Updated 11 ಏಪ್ರಿಲ್ 2022, 13:13 IST
ಅಕ್ಷರ ಗಾತ್ರ

ಇಂದೋರ್(ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ರಾಜಕಾರಣ ಪ್ರವೇಶಕ್ಕೆ ಮುಂದಾಗಿದ್ದಾರೆ.

'ಜನರು ಬಯಸಿದ್ದೇ ಆದಲ್ಲಿ ರಾಜಕೀಯಕ್ಕೆ ಬರಲು ಸಿದ್ಧನಿದ್ದೇನೆ. ಜನತೆಗೆ ಸೇವೆ ಸಲ್ಲಿಸಲು ರಾಜಕೀಯ ರಂಗವು ಅವಕಾಶ ಮಾಡಿಕೊಡಲಿದೆ' ಎಂದು ರಾಬರ್ಟ್ ವಾದ್ರಾ ಅವರು ತಿಳಿಸಿದ್ದಾರೆ.

ಭಾನುವಾರ ಉಜ್ಜೈನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿ ಸ್ಥಳೀಯ ಯೂಟ್ಯೂಬ್ ಚಾನೆಲ್‌ವೊಂದರ ಜತೆ ಮಾತನಾಡಿದ ಅವರು, ‘ನನಗೆ ರಾಜಕೀಯ ಅರ್ಥವಾಗುತ್ತದೆ. ಜನರು ತಮ್ಮನ್ನು ನಾನು ಪ್ರತಿನಿಧಿಸಬೇಕು ಎಂದು ಬಯಸಿದಲ್ಲಿ, ನಾನು ಜನರಿಗಾಗಿ ಏನಾದರೂ ಬದಲಾವಣೆ ಮಾಡಲು ಅವಕಾಶವಿದೆ ಎಂದಾದಲ್ಲಿ, ರಾಜಕೀಯಕ್ಕೆ ಪ್ರವೇಶಿಸುತ್ತೇನೆ' ಎಂದು ಹೇಳಿದರು.

‘ಕಳೆದ 10 ವರ್ಷಗಳಿಂದ ಜನರಪರ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನು ರಾಜಕೀಯ ಪ್ರವೇಶ ಮಾಡಲಿ ಅಥವಾ ಪ್ರವೇಶಿಸದೆ ಇರಲಿ, ನನ್ನ ಜನಪರ ಕೆಲಸಗಳು ಮಾತ್ರ ಮುಂದುವರಿಯಲಿವೆ. ರಾಜಕೀಯ ಬೆಳವಣಿಗೆಗಳು ಮತ್ತು ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿ ನಿತ್ಯ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಚರ್ಚಿಸುತ್ತಿರುತ್ತೇನೆ. ಮುಂದೆ ಏನಾಗಲಿದೆಯೋ ನೋಡೋಣ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT