ದೇಶವು ಕೋವಿಡ್ ಸೋಂಕು, ನಾಗರಿಕರ ಪ್ರತಿಭಟನೆಗಳು, ದುರಂತಗಳು, ಪ್ರಮುಖ ರಾಜಕೀಯ ಬೆಳವಣಿಗೆಳಿಗೆ ಸಾಕ್ಷಿಯಾದ ವರ್ಷ 2022. ಈ ವರ್ಷದಲ್ಲಿ ದೇಶದಲ್ಲಿ ಘಟಿಸಿದ ಪ್ರಮುಖ ಘಟನೆಗಳಇಣುಕು ನೋಟವಿದು...
***
ಜನವರಿ
5: ಪಂಜಾಬ್ ಚುನಾವಣಾ ರ‍್ಯಾಲಿಗೆ ರಸ್ತೆ ಮಾರ್ಗದ ಮೂಲಕ ಹೋಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಟ್ಟಿದ ರೈತರ ರಸ್ತೆ ತಡೆ ಬಿಸಿ. ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದ ಮೋದಿ ವಾಪಸಾಗಬೇಕಾಯಿತು
– ರಾಜಸ್ಥಾನದಲ್ಲಿ ಓಮೈಕ್ರಾನ್‌ನಿಂದ 73 ವರ್ಷದ ವೃದ್ಧ ಸಾವು– ಇದು ದೇಶದ ಮೊದಲ ಪ್ರಕರಣ
ಫೆಬ್ರುವರಿ
7: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿಯಾಗಿ ಶಾಂತಿಶ್ರೀ ಧೂಲಿಪುಡಿ ಪಂಡಿತ್ ನೇಮಕ
18: 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ– 8 ಜನರಿಗೆ ಗಲ್ಲು, 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ
23: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಹಣ ಅಕ್ರಮ ವರ್ಗಾವಣೆ ಮಾಡಿದ ಸಂಬಂಧ ಎನ್‌ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ (62) ಇ.ಡಿಯಿಂದ ಬಂಧನ
ಮಾರ್ಚ್
9: ಆಕಸ್ಮಿಕವಾಗಿ ಸಿಡಿದು ಪಾಕಿಸ್ತಾನ ನೆಲಕ್ಕೆ ಅಪ್ಪಳಿಸಿದಭಾರತದ ಸಿಡಿತಲೆರಹಿತ ಸೂಪರ್‌ಸಾನಿಕ್ ಕ್ಷಿಪಣಿ
10: ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು; ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲುವು– ಪಂಜಾಬ್ ಮುಖ್ಯಮಂತ್ರಿ ಗಾದಿಯೇರಿದ ಭಗವಂತ ಸಿಂಗ್ ಮಾನ್
21: ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಮತ್ತು ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ ವಚನ
23: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ
25: ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿಯೋಗಿ ಆದಿತ್ಯನಾಥ ಪ್ರಮಾಣ ವಚನ
ಏಪ್ರಿಲ್
1: ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಆಫ್‌ಸ್ಪಾ) ಅಡಿ, ‘ಪ್ರಕ್ಷುಬ್ಧ’ವೆಂದು ಗುರುತಿಸಿರುವ ಹಲವು ಪ್ರದೇಶಗಳಲ್ಲಿ ಈ ಕಾಯ್ದೆ ಹಿಂದಕ್ಕೆ– ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಣೆ
6: ಕೋವಿಡ್ ಇತರೆ ತಳಿಗಳಿಗಿಂತ ವೇಗವಾಗಿ ಹರಡುವ ‘ಎಕ್ಸ್.ಇ’ಹೊಸ ತಳಿಯ ಮೊದಲ ಪ್ರಕರಣ ಮುಂಬೈ ನಗರದಲ್ಲಿ ಪತ್ತೆ
7: ‘ಎಲ್ಲಾ ರಾಜ್ಯಗಳ ಜನರು ಸಂಪರ್ಕಕ್ಕಾಗಿ ಹಿಂದಿ ಭಾಷೆ ಬಳಸಬೇಕು’ – ಅಮಿತ್ ಶಾ ಕರೆ– ಇದಕ್ಕೆ ದೇಶದಾದ್ಯಂತ ಭಾರಿ ವಿರೋಧ
29: ಕಲ್ಲಿದ್ದಲು ಕೊರತೆ ನೀಗಿಸಲು ಕಲ್ಲಿದ್ದಲು ಸಾಗಣೆ ರೈಲುಗಳ ಸುಗಮ ಸಂಚಾರಕ್ಕಾಗಿ 657 ಪ್ರಯಾಣಿಕ ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ
30: ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಸಲು ಪ್ರಧಾನಿ ಮೋದಿ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಪ್ರಬಲ ಪ್ರತಿಪಾದನೆ
ಮೇ
3: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯಿಸುವಂತಿಲ್ಲ. ಲಸಿಕೆಯ ಪ್ರತಿಕೂಲ ಪರಿಣಾಮ ಬಹಿರಂಗಪಡಿಸಬೇಕು– ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
5: ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿ– ಅಮಿತ್ ಶಾ
15: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೊ ಯಾತ್ರೆ’ ನಡೆಸಲು ರಾಜಸ್ಥಾನದ ಉದಯಪುರದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ತೀರ್ಮಾನ
– ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಸಂಘಟಿಸಿದ್ದ ಭಾರತೀಯ ಕಿಸಾನ್ ಯೂನಿಯನ್‌ನಲ್ಲಿ (ಬಿಕೆಯು) ಒಡಕು, ಸಂಘಟನೆಯ ಹೊಸ ಬಣ ಸ್ಥಾಪಿಸಿದ ಬಿಕೆಯು ಉಪಾಧ್ಯಕ್ಷ ರಾಜೇಶ್ ಚೌಹಾಣ್
17: ವಾರಾಣಸಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ಜಾಗಕ್ಕೆ ರಕ್ಷಣೆ ನೀಡಲು, ಮುಸ್ಲಿಮರಿಗೆ ಮಸೀದಿಯಲ್ಲಿ ನಮಾಜ್‌ಗೆ ಅವಕಾಶ ಕೊಡಲು ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್ ಸೂಚನೆ
25: ಭಯೋತ್ಪಾದನೆಗೆ ಹಣಕಾಸು ನೆರವು– ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ, ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್
30: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿದೆಹಲಿಯ ಸಚಿವ, ಎಎಪಿ ನಾಯಕ ಸತ್ಯೇಂದ್ರ ಜೈನ್ ಇ.ಡಿಯಿಂದ ಬಂಧನ
ಜೂನ್
14: ಸೇನಾ ನೇಮಕಾತಿಗೆ ‘ಅಗ್ನಿಪಥ’ ಯೋಜನೆ ಪ್ರಕಟಿಸಿದ ಕೇಂದ್ರ ಸರ್ಕಾರ
16: ‘ಅಗ್ನಿಪಥ’ ಯೋಜನೆ ವಿರುದ್ಧ ಉತ್ತರ ಭಾರತದ ವಿವಿಧೆಡೆ ಭಾರಿ ಪ್ರತಿಭಟನೆ
17: ‘ಅಗ್ನಿಪಥ’ ವಿರೋಧಿಸಿ, ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಕಾರರು ಹಚ್ಚಿದ ಕಿಚ್ಚಿಗೆ ಕೆಲವು ರೈಲು ಬೋಗಿಗಳು ಆಹುತಿ. ಪೊಲೀಸರ ಗೋಲಿಬಾರ್‌ಗೆ ಒಬ್ಬ ವ್ಯಕ್ತಿ ಸಾವು
22 ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರ ಉರುಳಿಸುವುದಾಗಿ ಶಿವಸೇನಾ ಭಿನ್ನಮತೀಯ ಶಾಸಕ ಏಕನಾಥ್ ಶಿಂದೆ ಘೋಷಣೆ
25: ಕ್ರಿಮಿನಲ್ ಪಿತೂರಿ ಪ್ರಕರಣ– ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಗುಜರಾತ್ ಭಯೋತ್ಪಾದನೆ ನಿಗ್ರಹ ದಳದಿಂದ (ಎಟಿಎಸ್) ಮುಂಬೈನಲ್ಲಿ ಬಂಧನ
28: ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಿತ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಅವರ ಕತ್ತು ಸೀಳಿ ಹತ್ಯೆ
29: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ, ವಿಧಾನ ಪರಿಷತ್ ಸದಸ್ಯತ್ವಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
30: ಶಿವಸೇನಾ ನಾಯಕ ಏಕನಾಥ್ ಶಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡಣವೀಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ಜುಲೈ
8:ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಮೇಘ ಸ್ಫೋಟಕ್ಕೆ 15 ಮಂದಿ ಸಾವು, 40 ಯಾತ್ರಾರ್ಥಿಗಳು ನಾಪತ್ತೆ
– ನಿರ್ಮಾಣ ಹಂತದ ನೂತನ ಸಂಸತ್ ಭವನದ ಕಟ್ಟಡದ ಮೇಲೆ9.5 ಟನ್ ತೂಕದ ನೂತನ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ
21: ದೇಶದ 15ನೇ ರಾಷ್ಟ್ರಪತಿಯಾಗಿಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆ; ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ ಸೋಲು
ಆಗಸ್ಟ್
1:ಪತ್ರಾ ಚಾಳ್ ಭೂಹಗರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಬಂಧಿಸಿದ ಇ.ಡಿ
6: ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನ್‌ಕರ್ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆ; ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಗೆ ಸೋಲು
9: ಬಿಜೆಪಿಯ ಸಖ್ಯ ತೊರೆದ ಬಿಹಾರದ ಜೆಡಿಯು ನಾಯಕ ನಿತೀಶ್ ಕುಮಾರ್‌ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
10: ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಮುಖ್ಯಮಂತ್ರಿಯಾಗಿನಿತೀಶ್ ಕುಮಾರ್ ಅಧಿಕಾರ ಸ್ವೀಕಾರ
15: ಬಿಲ್ಕಿಸ್ ಬಾನು ಪ್ರಕರಣದ 11 ಅತ್ಯಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ. ಇದಕ್ಕೆ ವಿಪಕ್ಷಗಳ ಆಕ್ಷೇಪ. ನಿರ್ಧಾರ ಸಮರ್ಥಿಸಿಕೊಂಡ ಗುಜರಾತ್ ಸರ್ಕಾರ. ಅತ್ಯಾಚಾರಿಗಳಿಗೆ ಹೂಹಾರ ಹಾಕಿ ಸ್ವಾಗತ.
26: ಗುಲಾಂ ನಬಿ ಆಜಾದ್ ಕಾಂಗ್ರೆಸ್‌ಗೆ ರಾಜೀನಾಮೆ
ಸೆಪ್ಟೆಂಬರ್
6: ಕಾರು ಮತ್ತು ಎಸ್‌ಯುವಿಗಳ ಹಿಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ– ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ
7: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಹುಲ್ ಗಾಂಧಿ ಅವರಿಗೆ ತ್ರಿವರ್ಣ ಧ್ವಜ ನೀಡುವ ಮೂಲಕ ಕನ್ಯಾಕುಮಾರಿಯಲ್ಲಿ ‘ಭಾರತ್ ಜೋಡೊ ಯಾತ್ರೆ’ಗೆ ಚಾಲನೆ
8: ಹೆಸರು ಬದಲಿಸಿದ ‘ಕರ್ತವ್ಯಪಥ’ ರಸ್ತೆ ಪ್ರಧಾನಿಯಿಂದ ಉದ್ಘಾಟನೆ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಈ ರಸ್ತೆಗೆ ಮೊದಲು ‘ರಾಜಪಥ’ ಎಂಬ ಹೆಸರಿತ್ತು
14:ಗೋವಾ ಕಾಂಗ್ರೆಸ್‌ನ ಎಂಟು ಶಾಸಕರು ಬಿಜೆಪಿ ಸೇರ್ಪಡೆ
21:ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳಾಗಿ ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಥಾಮಸ್, ಲೋಕಸಭೆಯ ಮಾಜಿ ಉಪ ಸಭಾಧ್ಯಕ್ಷ ಕರಿಯಾ ಮುಂಡಾ ನಾಮನಿರ್ದೇಶನ
22: ಎನ್‌ಐಎ ನೇತೃತ್ವದಲ್ಲಿ ವಿವಿಧ ತನಿಖಾ ಸಂಸ್ಥೆಗಳಿಂದ 15 ರಾಜ್ಯಗಳಲ್ಲಿ ಪಿಎಫ್‌ಐಗೆ ಸೇರಿದ 93 ಸ್ಥಳಗಳಲ್ಲಿ ಶೋಧ; 106 ಕಾರ್ಯಕರ್ತರ ಬಂಧನ
27:ಕರ್ನಾಟಕವೂ ಸೇರಿ ಏಳು ರಾಜ್ಯಗಳಲ್ಲಿ ಪಿಎಫ್‌ಐ ಜತೆಗೆ ನಂಟು ಹೊಂದಿದ್ದ 230 ಮಂದಿಯನ್ನು ಬಂಧಿಸಿದ ಎನ್‌ಐಎ
29:ಅವಿವಾಹಿತೆಯರು ಸೇರಿ ಎಲ್ಲ ಮಹಿಳೆಯರಿಗೂ ಭ್ರೂಣಕ್ಕೆ 24 ವಾರ ತುಂಬುವವರೆಗೆ ಸುರಕ್ಷಿತ ಗರ್ಭಪಾತದ ಹಕ್ಕು ಇದೆ– ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅಕ್ಟೋಬರ್
3:ಎಚ್‌ಎಎಲ್ ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ‘ಪ್ರಚಂಡ’ ಹೆಸರಿನ ಲಘು ಯುದ್ಧ ಹೆಲಿಕಾಪ್ಟರ್‌ಗಳು ವಾಯುಪಡೆ ಮತ್ತು ಭೂಸೇನೆಗೆ ಸೇರ್ಪಡೆ
5:ಉತ್ತರಾಖಂಡದ ಪೌಡಿ ಗಡವಾಲ್ ಜಿಲ್ಲೆಯಲ್ಲಿ ಮದುವೆ ದಿಬ್ಬಣದ ಬಸ್ ಕಂದಕಕ್ಕೆ ಉರುಳಿ 33 ಮಂದಿ ಸಾವು
10: ಸಮಾಜವಾದಿ ಪಕ್ಷದ ನೇತಾರ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನ
17: ಎರಡು ದಶಕಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ
18: ಕೇದಾರನಾಥ ದೇವಾಲಯದಿಂದ ಗುಪ್ತಕಾಶಿಗೆ ಹೋಗುತ್ತಿದ್ದ ಹೆಲಿಕಾಪ್ಟರ್ ದಟ್ಟ ಮಂಜಿನ ಕಾರಣದಿಂದ ಪತನ, ಆರು ಮಂದಿ ಭಕ್ತರು ಮತ್ತು ಪೈಲಟ್ ಸಾವು
21: ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಲು ಮೂರು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ಮಧ್ಯಂತರ ಆದೇಶ
– ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್‌ನಲ್ಲಿ ಸೇನೆಯ ಸುಧಾರಿತ ಹೆಲಿಕಾಪ್ಟರ್ ಪತನ– ನಾಲ್ವರು ಸಿಬ್ಬಂದಿ ಸಾವು
28: ಶಶಿ ತರೂರ್ ವಿರುದ್ಧ ಗೆಲುವು, ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ
30:ಪಶ್ಚಿಮ ಗುಜರಾತ್‌ನ ಮಚ್ಚು ನದಿಯ ಮೊರ್ಬಿ ತೂಗು ಸೇತುವೆ ಕುಸಿದು 136 ಜನರ ದುರ್ಮರಣ
ನವೆಂಬರ್
1:ಮೊರ್ಬಿ ತೂಗು ಸೇತುವೆ ದುರಂತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೂ ಭೇಟಿ ನೀಡಿ ಸಾಂತ್ವನ
7: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿ ಎತ್ತಿಹಿಡಿದಸುಪ್ರೀಂ ಕೋರ್ಟ್
11: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಾದ ನಳಿನಿ ಶ್ರೀಹರನ್ ಮತ್ತು ಇತರ ಐವರ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
14: ಮುಂಬೈ ಮೂಲದ ಕಾಲ್‌ಸೆಂಟರ್ ಉದ್ಯೋಗಿ ಶ್ರದ್ಧಾ ವಾಲಕರ್ ಭೀಕರ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆಕೆಯ ಸಹ ಜೀವನದ ಸಂಗಾತಿ ಆಫ್ತಾಬ್ ಪೂನಾವಾಲಾ;6 ತಿಂಗಳ ಹಿಂದಿನ ಪ್ರಕರಣ ಬೆಳಕಿಗೆ
18: ಸ್ಕೈರೂಟ್ ಏರೋಸ್ಪೇಸ್ ಕಂಪನಿಯು ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್–ಎಸ್’ ಮೂಲಕ ಮೂರು ಉಪಗ್ರಹಗಳು ಕಕ್ಷೆಗೆಯಶಸ್ವಿ ಸೇರ್ಪಡೆ
22: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ವಿವಾದಿತ ಗಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 6 ಮಂದಿ ಸಾವು
26: ಕೇಂದ್ರ ಸರ್ಕಾರಕ್ಕೆ ಸೇರಿದ 15 ವರ್ಷ ಹಳೆಯದಾದ ಎಲ್ಲ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟ
27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಒಂಬತ್ತು ಉಪಗ್ರಹಗಳ ಗುಚ್ಛ ನಭಕ್ಕೆ ಯಶಸ್ವಿ ಉಡಾವಣೆ;
– ಎಲ್ಗಾರ್ ಪರಿಷತ್– ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್‌ನಿಂದಜಾಮೀನು ಸಿಕ್ಕಿ, ಮುಂಬೈನ ತಲೋಜಾ ಜೈಲಿನಿಂದ ಬಿಡುಗಡೆ
ಡಿಸೆಂಬರ್
1: ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳೇ ಇರುವ ಪೀಠ ರಚಿಸಿದ ಸಿಜೆಐ
– ಭಾರತಕ್ಕೆ ಡಿ.1ರಿಂದ ಜಿ–20 ಅಧ್ಯಕ್ಷತೆ ಪಟ್ಟ
7: 15 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ದೆಹಲಿ ಪಾಲಿಕೆ ಆಡಳಿತ ಎಎಪಿಗೆ
l ನೋಟು ಅಮಾನ್ಯದ ದಾಖಲೆ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ‘ಸುಪ್ರೀಂ’ ಸೂಚನೆ
8: ಗುಜರಾತ್ ಚುನಾವಣೆ: ಸತತ ಏಳನೇ ಬಾರಿಗೆ ಬಿಜೆಪಿಗೆ ಅಧಿಕಾರ– ಎರಡನೇ ಬಾರಿಗೆ ಸಿಎಂ ಆಗಿ ಭೂಪೇಂದ್ರ ಪಟೇಲ್; ಖಾತೆ ತೆರೆದ ಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ; ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರ– ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖ್ಖು
– ದಕ್ಷಿಣ ರಾಜ್ಯಗಳಿಗೆ ಅಪ್ಪಳಿಸಿದ ಮ್ಯಾಂಡಸ್ ಚಂಡಮಾರುತ
12: ಅರುಣಾಚಲ ಪ್ರದೇಶದಲ್ಲಿ ತವಾಂಗ್ ವಲಯದ ಯಾಂಗ್‌ತ್ಸೆ ಗಡಿಯಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆಡಿ.9ರಂದು ಘರ್ಷಣೆ ನಡೆದಿರುವ ಬಗ್ಗೆ ಸೇನೆಯಿಂದ ಅಧಿಕೃತ ಮಾಹಿತಿ
– ಬೆಂಗಳೂರಿನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ–20 ರಾಷ್ಟ್ರಗಳ ಮೊದಲ ಸಮಾಲೋಚನಾ ಸಭೆ
14: ಕರ್ನಾಟಕ– ಮಹಾರಾಷ್ಟ್ರ ಗಡಿವಿವಾದ: ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಏಕನಾಥ್ ಶಿಂದೆ ಜತೆಗೆ ಸಭೆ ನಡೆಸಿದ ಅಮಿತ್ ಶಾ
17: ‘ಮೋದಿ ಗುಜರಾತ್‌ನ ಕಟುಕ’ ಎಂದ ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ವಿರುದ್ಧ ದೇಶದಾದ್ಯಂತ ಬಿಜೆಪಿಯಿಂದ ಪ್ರತಿಭಟನೆ
18: ಕ್ಷಿಪಣಿ ಧ್ವಂಸಕ,ಸ್ವದೇಶಿ ನಿರ್ಮಿತ ‘ಐಎನ್‌ಎಸ್ ಮೊರ್ಮುಗಾವೊ’ ಸಮರನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆ
– ಭಾರತದ ಸರ್‌ಗಂ ಕೌಶಲ್ ಮುಡಿಗೇರಿದ ‘ಮಿಸೆಸ್ ವರ್ಲ್ಡ್’ ಕಿರೀಟ
19: ಭಾರತದಲ್ಲಿ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಮತ್ತು ಪಠ್ಯ ಆಧಾರಿತ ಸೇವೆ ಆರಂಭ– ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ
20:ಗ್ರಾಮೀಣಾಭಿವೃದ್ಧಿಯಲ್ಲಿನ ಅನುಪಮ ಸೇವೆಗೆ ಸೆತ್ರಿ ಸೆಂಗ್ಟಮ್‌ಗೆ ಒಲಿದ ರೋಹಿಣಿ ನಯ್ಯರ್ ಪ್ರಶಸ್ತಿ
22: ಕೋವಿಡ್ ತಡೆಯಲು ಆಡಳಿತ ಯಂತ್ರ ಸಜ್ಜಾಗಿರಿಸುವ ಜೊತೆಗೆ ಕೋವಿಡ್ ಪರೀಕ್ಷೆ ಹಾಗೂ ವೈರಾಣು ಸಂರಚನಾ ವಿಶ್ಲೇಷಣೆ ಹೆಚ್ಚಿಸಲು ಮೋದಿ ಸೂಚನೆ
22: ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಕಾಡು ಕುರುಬರ ಜತೆಗೆ ಬೆಟ್ಟ ಕುರುಬರನ್ನು ಸೇರಿಸುವ ಮಸೂದೆಗೆ ಸಂಸತ್ ಅಂಗೀಕಾರ
23: ಉತ್ತರ ಸಿಕ್ಕಿಂನ ಝೆಮಾದ ಬಳಿ ಸೇನಾ ಟ್ರಕ್ ಕಣಿವೆಗೆ ಉರುಳಿ ಮೂವರು ಅಧಿಕಾರಿಗಳು (ಜೆಸಿಒ) ಸೇರಿ 16 ಸೈನಿಕರ ದುರ್ಮರಣ
24: ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ ಹಾಗೂ ಥಾಯ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ಕಡ್ಡಾಯ– ಕೇಂದ್ರ ಸರ್ಕಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.