ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಕ್ಷೇತ್ರಗಳಲ್ಲಿ ಗೆದ್ದು ಮುಖ್ಯಮಂತ್ರಿ ಕನಸು ಕಾಣುತ್ತಿರುವ ನಿತೀಶ್: ಮನೋಜ್ ಝಾ

Last Updated 12 ನವೆಂಬರ್ 2020, 8:46 IST
ಅಕ್ಷರ ಗಾತ್ರ

ಪಟ್ನಾ: ಕೇವಲ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ನಿತೀಶ್‌ ಕುಮಾರ್‌ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮನೋಜ್‌ ಝಾ ಕೆಣಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಝಾ, ‘ಸಾರ್ವಜನಿಕರು ನಿಜವಾಗಿಯೂ ನಾಯಕರು. ಆದರೆ, ಅವರು ನಿಮ್ಮನ್ನು(ನಿತೀಶ್‌ ಕುಮಾರ್) ಇರಿಸಿರುವ ಸ್ಥಿತಿಯನ್ನು ನೋಡಿ. ನೀವು 40 ಸ್ಥಾನಗಳನ್ನು ಪಡೆದ ನಂತರವೂ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದೀರಿ. ನೀವು ಜನರ ಆದೇಶವನ್ನು ವಿಶ್ಲೇಶಿಸಿದರೆ, ಅದು ನಿರ್ಣಾಯಕವಾಗಿ ನಿಮ್ಮ ವಿರುದ್ಧವೇ ಇದೆ’ ಎಂದಿದ್ದಾರೆ.

ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಝಾ ಈ ರೀತಿ ಹೇಳಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜನತಾ ದಳ (43) ಹಾಗೂ ಬಿಜೆಪಿ (74) ನೇತೃತ್ವದ ಎನ್‌ಡಿಎ ಒಟ್ಟು 125 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆರ್‌ಜೆಡಿ 75 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ 74 ಕಡೆ ವಿಜಯ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ‘ಮಹಾಗಠಬಂಧನ’110 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

‘ಬಿಹಾರದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾರು ಎಷ್ಟೇ ಸ್ಥಾನಗಳನ್ನು ಪಡೆದರೂ ನಿತೀಶ್‌ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಪಕ್ಷದ ಉನ್ನತ ಮಟ್ಟದ ನಾಯಕರು ಜನರಿಗೆ ಮಾತು ಕೊಟ್ಟಿದ್ದರು. ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ಬಿಜೆಪಿ ಮುಖಂಡ, ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT