ನವದೆಹಲಿ: ಝೈಡಸ್–ಕ್ಯಾಡಿಲಾ ಕಂಪನಿ ತಾನು ಉತ್ಪಾದಿಸಿರುವ ಕೋವಿಡ್–19 ಲಸಿಕೆ ‘ಝೈಕೋವ್–ಡಿ’ಗೆ ₹ 1,900 ದರ ನಿಗದಿಪಡಿಸಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಆದರೆ, ಲಸಿಕೆಯ ದರವನ್ನು ಇನ್ನಷ್ಟು ಕಡಿಮೆಗೊಳಿಸುವ ಸಂಬಂಧ ಕಂಪನಿಯೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಈ ವಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಮೂರು ಡೋಸ್ಗಳ ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದಾಗಿದೆ. ಮೊದಲ ಡೋಸ್ ಪಡೆದ ನಂತರ ಕ್ರಮವಾಗಿ 28 ಮತ್ತು 56ನೇ ದಿನ ಎರಡು ಹಾಗೂ ಮೂರನೇ ಡೋಸ್ ನೀಡಲಾಗುತ್ತದೆ.

‘ಮೂರು ಡೋಸ್ಗಳು ಸೇರಿದಂತೆ ಲಸಿಕೆಗೆ ಕಂಪನಿಯು ₹ 1,900 ದರ ನಿಗದಿಪಡಿಸಿದೆ. ದರ ಇಳಿಸುವಂತೆ ಕಂಪನಿಗೆ ಕೋರಲಾಗಿದೆ. ಈ ಸಂಬಂಧ ಮೂರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಕಂಪನಿಯ ಪ್ರತಿಕ್ರಿಯೆ ಬಂದ ಬಳಿಕ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಇವೇ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.