ಗುರುವಾರ , ಜುಲೈ 29, 2021
23 °C

ರಾಜ್ಯದಲ್ಲಿ 481 ಕಪ್ಪು ಶಿಲೀಂಧ್ರ ಪ್ರಕರಣ: ಕೇಂದ್ರದಿಂದ 1,221 ವಯಲ್ಸ್ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಡೀ ದೇಶದಲ್ಲಿ  ಮಂಗಳವಾರ ರಾತ್ರಿ 9.30ರ ವೇಳೆಯ ಮಾಹಿತಿ ಪ್ರಕಾರ 11,717 ಕಪ್ಪುಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಪ್ರಕರಣಗಳು ಪತ್ತೆಯಾಗಿದೆ. ಈ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 29,250 ವಯಲ್ಸ್ ಅಂಫೋಟೆರಿಸಿನ್-ಬಿ ಔಷಧವನ್ನು ಹಂಚಿಕೆ ಮಾಡಿದೆ.

‘ಕರ್ನಾಟಕದಲ್ಲಿ 481 ಕಪ್ಪು ಶಿಲೀಂಧ್ರ ಪ್ರಕರಣಗಳು ದೃಢಪಟ್ಟಿದ್ದು, 1,221 ವಯಲ್ಸ್ ಒದಗಿಸಲಾಗಿದೆ. ಸೋಂಕು ಪ್ರಕರಣಗಳನ್ನು ಪರಿಗಣಿಸಿ, ಈ ಔಷಧದ ಹಂಚಿಕೆ ನಿರಂತರವಾಗಿ ನಡೆಯಲಿದೆ’ ಎಂದು ಔಷಧ ಖಾತೆಯನ್ನೂ ಹೊಂದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್‌ ಮಾಡಿದ್ದಾರೆ.

‘ಮೇ 25ರಂದು ರಾತ್ರಿ 9.30ರ ಮಾಹಿತಿಯಂತೆ, ಅತೀ ಹೆಚ್ಚು ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಗುಜರಾತ್‌ ರಾಜ್ಯದಲ್ಲಿ 2,859 ಪತ್ತೆಯಾಗಿದೆ. ಆ ರಾಜ್ಯಕ್ಕೆ 7,260 ವಯಲ್ಸ್‌ ಹಂಚಿಕೆ ಮಾಡಲಾಗಿದೆ. ಉಳಿದಂತೆ, ಮಹಾರಾಷ್ಟ್ರದಲ್ಲಿ 2,770 (7,034), ಆಂದ್ರಪ್ರದೇಶದಲ್ಲಿ 768 (1,950), ಮಧ್ಯಪ್ರದೇಶದಲ್ಲಿ 752 (1,910), ತೆಲಂಗಾಣದಲ್ಲಿ 744 (1,889), ರಾಜಸ್ಥಾನದಲ್ಲಿ 492 (1,249), ಕರ್ನಾಟಕದಲ್ಲಿ 481 (1,221), ಹರಿಯಾಣದಲ್ಲಿ 436 (1,107), ಉತ್ತರಪ್ರದೇಶದಲ್ಲಿ 701 (1,780) (ಆವರಣದಲ್ಲಿ ಹಂಚಿಕೆ ಮಾಡಿದ ವಯಲ್ಸ್) ಪ್ರಕರಣಗಳು ಪತ್ತೆ ಆಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು