ಭಾನುವಾರ, ಏಪ್ರಿಲ್ 18, 2021
24 °C

ಬಸನಗೌಡ ಪಾಟೀಲ ಯತ್ನಾಳ ಆರೋಪ ನ್ಯಾಯಯುತ: ಎಚ್‌. ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಸಂವಿಧಾನದ ಚೌಕಟ್ಟಿನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದ್ದಾರೆ. ಅವರ ಆರೋಪದಲ್ಲಿ ನ್ಯಾಯವಿದೆ’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪಕ್ಷ, ಸರ್ಕಾರದ ವಿರುದ್ಧ ಯತ್ನಾಳ ಹೇಳಿಕೆ ನೀಡಿಲ್ಲ. ಜನವಿರೋಧಿ ಭಾಷಣಗಳನ್ನೂ‌ ಮಾಡಿಲ್ಲ. ಸರ್ಕಾರದ ರೀತಿನೀತಿಗಳ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ’ ಎಂದು ಸಮರ್ಥಿಸಿದರು.

‘ಮಂತ್ರಿಗಳ ನಿರಾಸಕ್ತಿ, ಅವರ ನಡವಳಿಕೆ ಬಗ್ಗೆಯೂ ಯತ್ನಾಳ ಹೇಳಿದ್ದಾರೆ. ವಿರೋಧ ಪಕ್ಷಗಳು ಸುಮ್ಮನಾದರೆ ಇನ್ನೇನು ಮಾಡಬೇಕು’ ಎಂದೂ ಪ್ರಶ್ನಿಸಿದರು.

ಸರ್ಕಾರ ವಿಫಲ: ‘ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಚಳುವಳಿ, ಹೋರಾಟ ಹೆಚ್ಚುತ್ತಿದೆ. ಮೇಲ್ವರ್ಗದಿಂದ ಹಿಡಿದು ಎಲ್ಲರೂ ಬೀದಿಗಿಳಿದಿದ್ದಾರೆ. ಮೆರವಣಿಗೆ, ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಯಾವ ವಿಚಾರದಲ್ಲೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ವಿಷಯ ನಿಭಾಯಿಸುವಲ್ಲಿ ಸರ್ಕಾರ ವಿಫಲ ವಾಗಿದೆ’ ಎಂದು ಟೀಕಿಸಿದರು.

‘ಮೀಸಲಾತಿ ಕೇಳಲು ಜನತಂತ್ರ ವ್ಯವಸ್ಥೆಯಲ್ಲಿ ಅವಕಾಶವಿದೆ. ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳಿವಳಿಕೆ ನೀಡಬೇಕು. ಕೇವಲ ಮನವಿ ಸ್ವೀಕರಿಸಿದರೆ ಎಲ್ಲವೂ‌ ಮುಗಿಯುವುದಿಲ್ಲ’ ಎಂದರು.

‘ಈಗಲೇ ಮೀಸಲಾತಿ ಘೋಷಿಸು ವಂತೆ ಪಂಚಮಸಾಲಿ ಸ್ವಾಮೀಜಿಗಳು ಪಟ್ಟು ಹಿಡಿದಿದ್ದಾರೆ. ಕುರುಬ ಸಮುದಾಯ ಕೂಡ ಮೀಸಲಾತಿ ಕೇಳುತ್ತಿದೆ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಕೇಳಿದ ಕೂಡಲೇ ಕೊಡಲು ಬರುವುದಿಲ್ಲ. ಆದರೆ, ಸರ್ಕಾರ ನಮಗೆ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು