ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ.ಭಾ.ಕೃತಿ ಸಂಪುಟ:ಭಾಗ–3 ಬಿಡುಗಡೆ

Last Updated 18 ಜನವರಿ 2021, 18:58 IST
ಅಕ್ಷರ ಗಾತ್ರ

ಬೆಂಗಳೂರು:‘ವಿಶ್ವಕರ್ಮ ಸಮಾಜದವರು ವೈದಿಕ ಪರಂಪರೆಯ ಭಾಗವೆಂದು ಗಟ್ಟಿ ಧ್ವನಿಯಲ್ಲಿ ಸಾರಿದವರು ವೇದ ಬ್ರಹ್ಮಶ್ರೀ ನಾ.ಭಾ.ಚಂದ್ರಶೇಖರಾಚಾರ್ಯರು’ ಎಂದು ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದರು.

ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯು ವಿಜಯನಗರದ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ನಾ.ಭಾ.ಕೃತಿ ಸಂಪುಟ: ಭಾಗ–3’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮಾಜದವರು ಶ್ರಮ ಸಂಸ್ಕೃತಿಯವರೋ, ವೇದಕಾಲದ ಪರಂಪರೆಯವರೋ ಎಂಬ ಜಿಜ್ಞಾಸೆಯಿದ್ದ ಕಾಲದಲ್ಲಿ ವಿಶ್ವಕರ್ಮರು ವೈದಿಕ ಧರ್ಮದ ಕವಲು ಎಂದುಚಂದ್ರಶೇಖರಾಚಾರ್ಯ ತೋರಿಸಿಕೊಟ್ಟಿದ್ದರು’.

‘ಸಮುದಾಯದ ಜನರು ಧಾರ್ಮಿಕವಾಗಿ, ಸಾಮಾಜಿಕವಾಗಿ ಎದುರಿಸುತ್ತಿದ್ದ ಸಂಕಟಗಳನ್ನು ಕೃತಿಗಳಲ್ಲಿ ಉಲ್ಲೇಖಿಸಿದ್ದು, ಸಂಧ್ಯಾವಂದನೆ, ವಾಸ್ತು ಶಾಸ್ತ್ರದ ಬಗ್ಗೆ ವಿದ್ವತ್ ಪೂರ್ಣವಾಗಿ ಲೇಖನಗಳನ್ನು ಮಂಡಿಸಿದ್ದಾರೆ’ ಎಂದರು.

ಸಾಹಿತಿ ಜಿ.ಜ್ಞಾನಾನಂದ,‘ಇಡೀ ದೇಶಕ್ಕೆ ದೇವಾಲಯ ನಿರ್ಮಾಣ ಮಾಡುವುದನ್ನು ಕಲಿಸಿದವರು ಕರ್ನಾಟಕದ ಶಿಲ್ಪಿಗಳು. ಆದರೆ, ಇಂದು ರಾಜ್ಯಕ್ಕೆ ಹೊರಗಿನಿಂದ ಶಿಲ್ಪಿಗಳನ್ನು ಕರೆಸಿ, ದೇಗುಲ ನಿರ್ಮಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಂದಿ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ, ‘ಸನಾತನ ಸಂಸ್ಕೃತಿಯ ಬೆನ್ನೆಲುಬು ವಿಶ್ವಕರ್ಮರು.ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತಿದ್ದು, ಪ್ರಚಾರದ ಕಡೆ ಸಾಗುತ್ತಿದ್ದೇವೆ. ಶಿಲ್ಪ ಮತ್ತು ಬ್ರಾಹ್ಮಣ ಒಂದೇ ನಾಣ್ಯದ ಎರಡು ಮುಖಗಳು. ಮುಂದಿನ ದಿನಗಳಲ್ಲಿ ಭಾರತದ ವಿಶ್ವಕರ್ಮರಿಗೆ ಸುವರ್ಣಯುಗ ಬರಲಿದೆ’ ಎಂದರು.

ಶಿಲ್ಪಿ ಎನ್.ಎಸ್.ಜನಾರ್ದನ ಮೂರ್ತಿ, ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಹಾಗೂ ಮಲ್ಲೇಪುರಂ ಜಿ. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಭೀಮಸೇನ ಬಡಿಗೇರ, ಎ.ಸಿ.ಮಹಾಲಿಂಗಾಚಾರ್, ಕೆ.ಆರ್.ಬಡಿಗೇರ್, ಬಿ.ಎಲ್.ವೇದಮೂರ್ತಿ, ಎಸ್. ಮಾಳಿಗಾಚಾರ್ಯ,ಕೆ.ಎಸ್.ಪ್ರಭಾಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT