ಭಾನುವಾರ, ಅಕ್ಟೋಬರ್ 2, 2022
19 °C

ಜಮೀರ್ ಅಹಮದ್‌ ಮುಖ್ಯಮಂತ್ರಿ ಆಗುತ್ತಾರೆ: ಬೆಳಗಾವಿ ಜಿಲ್ಲೆಯ ಪಂಚಾಕ್ಷರಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಜಮೀರ್ ಅಹಮದ್‌ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವ ಧರ್ಮೀಯರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಮುಂಬರುವ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ತಾಲ್ಲೂಕಿನ ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಯಕ್ಕುಂಡಿ ಗ್ರಾಮದ ದಿಲಾವರ್ ದರ್ಗಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಈ ದರ್ಗಾಗೆ ಜಮೀರ್ ಅವರು ಬೆಂಗಳೂರಿನಿಂದ ಬಂದಿದ್ದಾರೆ. ಇದರ ಶಕ್ತಿ ಎಷ್ಟಿದೆ ಎನ್ನುವುದನ್ನು ನೀವು ವಿಚಾರ ಮಾಡಬೇಕು. ಈಗಾಗಲೇ ಸಚಿರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇಂಥ ಒಳ್ಳೆಯ ಮನಸ್ಸು ಇರುವವರು ಮುಂದೆ ಮುಖ್ಯಮಂತ್ರಿ ಆಗಿ ಇನ್ನಷ್ಟು ಕೆಲಸ ಮಾಡಬೇಕು’ ಎಂದೂ ಹೇಳಿದರು.

‘ಇದರ ಜೊತೆಗೆ ಬೈಲಹೊಂಗಲ ಭಾಗದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಒಳ್ಳೆಯ ಕೆಲಸ ಮಾಡಿದ್ದಾರೆ.‌ ಮುಂದೆಯೂ ಅವರು ಆರಿಸಿ ಬರಬೇಕು. ಮಂತ್ರಿಯೂ ಆಗಬೇಕು’ ಎಂದರು.

ಶಾಸಕರಾದ ಜಮೀರ್‌ ಅಹಮದ್‌ ಖಾನ್, ಮಹಾಂತೇಶ ಕೌಜಲಗಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು