ಶನಿವಾರ, ಅಕ್ಟೋಬರ್ 24, 2020
28 °C

Covid-19 Karnataka Update | 10,145 ಪ್ರಕರಣ ದೃಢ, ಯಾವ ಜಿಲ್ಲೆಯಲ್ಲಿ ಎಷ್ಟು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 10,145 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 67 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 6,40,661ಕ್ಕೆ ಏರಿಕೆಯಾಗಿದೆ. ಒಟ್ಟಾರೆ 9,286 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈವರೆಗೆ 5,15,782 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,15,574 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇದರಲ್ಲಿ 847 ಜನರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಗುಣಮುಖರಾಗಿ 7,287 ಜನರು ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 4,340 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 1,92,043 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 2.50 ಲಕ್ಷದ ಗಡಿ ದಾಟಿದೆ. ಇಂದು 22 ಜನರು ಮೃತಪಟ್ಟಿದ್ದು, ಈವರೆಗೂ 3,067 ಮಂದಿ ಸಾವಿಗೀಡಾಗಿದ್ದಾರೆ.

ಬಾಗಲಕೋಟೆಯಲ್ಲಿ 97, ಬಳ್ಳಾರಿ 304, ಬೆಳಗಾವಿ 224, ಬೆಂಗಳೂರು ಗ್ರಾಮಾಂತರ 274, ಬೀದರ್ 65, ಚಾಮರಾಜನಗರ 141, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 227, ಚಿತ್ರದುರ್ಗ 122, ದಕ್ಷಿಣ ಕನ್ನಡ 293, ದಾವಣಗೆರೆ 106, ಧಾರವಾಡ 90, ಗದಗ 110, ಹಾಸನ 307, ಹಾವೇರಿ 112, ಕಲಬುರಗಿ 121, ಕೊಡಗು 148, ಕೋಲಾರ 165, ಕೊಪ್ಪಳ 85, ಮಂಡ್ಯ 233, ಮೈಸೂರು 1,037, ರಾಯಚೂರು 124, ರಾಮನಗರ 182, ತುಮಕೂರು 245, ಉಡುಪಿ 231, ಉತ್ತರ ಕನ್ನಡ 84, ವಿಜಯಪುರ 152 ಮತ್ತು ಯಾದಗಿರಿಯಲ್ಲಿ 119 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು