ಗುರುವಾರ , ಜುಲೈ 29, 2021
23 °C

ಔಷಧಿ ಪೂರೈಸುವ ಡ್ರೋನ್: ಪ್ರಾಯೋಗಿಕ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ಮೊಟ್ಟ ಮೊದಲ ಪ್ರಯೋಗಕ್ಕೆ ತಾಲ್ಲೂಕಿನ ಶಂಬೂಕನಗರದ ಬಳಿ ಚಾಲನೆ ನೀಡಲಾಯಿತು. ಡ್ರೋನ್ ಯಶಸ್ವಿ ಕಾರ್ಯಾರಂಭ ಮಾಡಿರುವುದು ಸಂತೋಷದ ವಿಚಾರ ಎಂದು ಡ್ರೋನ್‌ನ ನಿರ್ವಹಣೆ ಹಾಗೂ ಟಿಎಎಸ್ ಸಂಸ್ಥೆಯ ನಿರ್ದೇಶಕ ಗಿರೀಶ್ ರೆಡ್ಡಿ ತಿಳಿಸಿದರು.

ಗಿರೀಶ್ ರೆಡ್ಡಿ ಮಾತನಾಡಿ, ಡ್ರೋನ್ ಮೂಲಕ ಔಷಧ ಸಾಗಿಸುವ ದೇಶದ ಪ್ರಥಮ ಪ್ರಯೋಗ ಇದಾಗಿದೆ. ಸುಮಾರು 30-45 ದಿನದವರೆಗೆ ತಾಲ್ಲೂಕಿನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಅಧಿಕೃತವಾಗಿ ಸರ್ಕಾರದ ಅನುಮತಿಯ ಮೇರೆಗೆ ಜೂನ್ 21 ರ ಸೋಮವಾರ ಡ್ರೋನ್ ಉಡಾವಣೆಗೆ ಚಾಲನೆ ನೀಡಲಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಡ್ರೋನ್ ಮೂಲಕ ಔಷಧ ರವಾನಿಸುವ ಪ್ರಾಯೋಗಿಕ ಹಂತವನ್ನು ಬೆಂಗಳೂರಿನ ಟಿಎಎಸ್ ಸಂಸ್ಥೆಯ ನೇತೃತ್ವದಲ್ಲಿ ಆನ್‌ಲೈನ್ ಮೂಲಕ ಪರೀಕ್ಷಿಸಲಾಗಿದೆ. ವಿಭಿನ್ನ ಹಾಗೂ ವಿನೂತನ ಪ್ರಯತ್ನ ಇದಾಗಿದ್ದು ಈ ಪ್ರಾಯೋಗಿಕ ಪರೀಕ್ಷೆಯು ಟಿಎಎಸ್‌ ಸಂಸ್ಥೆ ಹಾಗೂ ನಾರಾಯಣ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದಿದೆ.

ಮೊದಲ ದಿನದಂದು ಸುಮಾರು 5 ಬಾರಿ ಡ್ರೋನ್‌ನ್ನು ಉಡಾವಣೆ ಮಾಡಲಾಗಿದ್ದು, ಒಟ್ಟು 2.5 ಕಿ.ಮೀ ದೂರ ಕ್ರಮಿಸಿದೆ ಎಂದರು.

ಸಂಸ್ಥೆಯ ಮುಖ್ಯಸ್ಥ ನಾಗೇಂದ್ರನ್ ಕಂದಸಾಮಿ, ಆರ್.ಶಶಿಕುಮಾರ್, ಎಂ.ನಿಶ್ಚಿತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು