ಗುರುವಾರ , ಜೂನ್ 24, 2021
28 °C

2ನೇ ಡೋಸ್‌ ಪಡೆವವರಿಗಷ್ಟೇ ಕೋವ್ಯಾಕ್ಸಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

dh fILE

ಬೆಂಗಳೂರು: ಬೇಡಿಕೆಗೆ ತಕ್ಕಂತೆ ಕೋವ್ಯಾಕ್ಸಿನ್‌ ಲಸಿಕೆ ರಾಜ್ಯಕ್ಕೆ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಲಭ್ಯ ಇರುವ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ಬಳಸಲು ಸರ್ಕಾರ ನಿರ್ಧರಿಸಿದೆ.

‘ಮೊದಲ ಡೋಸ್‌ನಲ್ಲಿ ಕೋವ್ಯಾಕ್ಸಿನ್ ಪಡೆದವರಿಗೆ ಮಾತ್ರ ಇದೇ ಲಸಿಕೆಯನ್ನು ಎರಡನೇ ಡೋಸ್‌ ಪಡೆಯುವವರಿಗೆ ನೀಡಲಾಗುವುದು. ಮೊದಲ ಡೋಸ್ ಲಸಿಕೆ ಪಡೆಯುವ 45 ವರ್ಷ ಮೇಲ್ಪಟ್ಟವರಿಗೆ ‘ಕೋವಿಶೀಲ್ಡ್‌’ ಲಸಿಕೆ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ‌

‘ಲಭ್ಯವಿರುವ ‘ಕೋವಿಶೀಲ್ಡ್’ ಲಸಿಕೆಗಳಲ್ಲಿ ಶೇ 70ರಷ್ಟನ್ನು ಎರಡನೇ ಡೋಸ್ ಬಾಕಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು. ಉಳಿದ ಶೇ 30ರಷ್ಟು ಲಸಿಕೆಗಳನ್ನು ಮಾತ್ರ ಮೊದಲ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು