ಮಂಗಳವಾರ, ನವೆಂಬರ್ 30, 2021
21 °C

ಎಲೆಕ್ಟ್ರಾನಿಕ್ ಉತ್ಪನ್ನದಲ್ಲಿ ₹1 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್ ಉತ್ಪನ್ನದ ಒಳಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಡ್ರಗ್ಸ್‌ನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

ಬೆಲ್ಜಿಯಂನಿಂದ ಭಾರತಕ್ಕೆ ಡ್ರಗ್ಸ್ ಕಳ್ಳ ಸಾಗಣೆ ಮಾಡಲಾಗುತ್ತಿತ್ತು. 1980 ಎಂಡಿಎಂಎ ಮಾತ್ರೆಗಳು ಇದ್ದವು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ಕೋರಿಯರ್ ಕೇಂದ್ರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಎಲೆಕ್ಟ್ರಾನಿಕ್ ಉತ್ಪನ್ನದಲ್ಲೇ ಮಾತ್ರೆಗಳನ್ನು ಬಚ್ಚಿಟ್ಟು ಪ್ಯಾಕ್ ಮಾಡಲಾಗಿತ್ತು. ಪ್ಯಾಕ್ ಬಗ್ಗೆ ಅನುಮಾನಗೊಂಡ ಕಸ್ಟಮ್ ‌ಅಧಿಕಾರಿಗಳು, ಅದನ್ನು ತೆರೆದು ನೋಡಿದಾಗಲೇ ಡ್ರಗ್ಸ್ ಸಿಕ್ಕಿವೆ.

ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳು, ಭಾರತದಲ್ಲಿರುವ ಉಪ ಪೆಡ್ಲರ್‌ಗಳಿಗೆ ಮಾತ್ರೆ ಕಳುಹಿಸುತ್ತಿದ್ದರೆಂಬ ಮಾಹಿತಿ ಇದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು