ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಜತೆ ಚರ್ಚೆ ನಡೆಸಬೇಕಿತ್ತು; ಚುನಾವಣಾ ಆಯೋಗದ ವಿರುದ್ಧ ಈಶ್ವರಪ್ಪ ಅಸಮಾಧಾನ

ಯಾವಾಗ ಚುನಾವಣೆ ನಡೆದರೂ ಪಕ್ಷ ಸಜ್ಜಾಗಿದೆ: ಈಶ್ವರಪ್ಪ ಹೇಳಿಕೆ
Last Updated 12 ಜುಲೈ 2021, 10:51 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣಾ ಪ್ರಕ್ರಿಯೆ ಆರಂಭಿಸುವ ಮೊದಲು ಚುನಾವಣಾ ಆಯೋಗ ಸೌಜನ್ಯಕ್ಕಾದರೂ ಸರ್ಕಾರದ ಜತೆ ಚರ್ಚೆ ನಡೆಸಬೇಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಚುನಾವಣೆ ನಡೆಸುವ ಹಕ್ಕು ಆಯೋಗಕ್ಕಿದೆ. ಮೀಸಲಾತಿ ಕರಡುಪಟ್ಟಿ ಪ್ರಕಟಿಸುವ ಮೊದಲು ಸರ್ಕಾರದ ಸಲಹೆ ಕೇಳಿದ್ದರೆ ಚರ್ಚಿಸಲು ಅವಕಾಶ ದೊರಕುತ್ತಿತ್ತು. ಮೀಸಲಾತಿ ಕುರಿತು ಹಲವರು ಅಪಸ್ವರ ತೆಗೆದಿದ್ದಾರೆ. ಈ ಕುರಿತು ಆಯೋಗ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ಕೋವಿಡ್ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಕಾರಣ ಡಿಸೆಂಬರ್‌ ವರೆಗೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎನ್ನುವುದು ಸರ್ಕಾರ ನಿಲುವು. ಯಾವಾಗ ಚುನಾವಣೆ ನಡೆದರೂ ಪಕ್ಷ ಸಜ್ಜಾಗಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವುಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT