ಬುಧವಾರ, ಫೆಬ್ರವರಿ 8, 2023
16 °C

‘ಪುರುಷೋತ್ತಮ ಸನ್ಮಾನ’ಕ್ಕೆ ಗುಜರಾತ್‌ನ ಮಗನ್‌ಭಾಯ್‌ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ:  ತೀರ್ಥಹಳ್ಳಿಯ ಪುರುಷೋತ್ತಮರಾವ್‌ ಕೃಷಿ ಸಂಶೋಧನಾ ಪ್ರತಿಷ್ಠಾನದಿಂದ ಸಾವಯವ ಕೃಷಿಕ ಪುರುಷೋತ್ತಮ ರಾಯರು ಹಾಗೂ ಶಾಂತಾ ದಂಪತಿಯ ನೆನಪಿನಲ್ಲಿ ನೀಡುವ ‘ಪುರುಷೋತ್ತಮ ಸನ್ಮಾನ’ಕ್ಕೆ ಈ ಬಾರಿ ಗುಜರಾತ್‌ನ ರೈತ ಮಗನ್‌ಭಾಯ್ ಹಮೀರ್‌ಭಾಯ್‌ ಆಯ್ಕೆಯಾಗಿದ್ದಾರೆ.

ಜ. 27ರಂದು ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ‘ಪುರುಷೋತ್ತಮ ಸನ್ಮಾನ’ ಕಾರ್ಯಕ್ರಮ ನಡೆಯಲಿದೆ. ಸಾವಯವ ಕೃಷಿಯಲ್ಲಿ ಸಾಧನೆ ಮಾಡುವ ರೈತರನ್ನು ಗುರುತಿಸಿ ಪ್ರತಿಷ್ಠಾನವು ರಾಷ್ಟ್ರ ಮಟ್ಟದಲ್ಲಿ  ಪುರಸ್ಕಾರ ನೀಡಿ  ಗೌರವಿಸುತ್ತಿದೆ.  ಮರುಭೂಮಿ ಯಾಗಿರುವ ಕಛ್‌ ಪ್ರದೇಶದ ಗಾಂಧಿಧಾಮ್ ಜಿಲ್ಲೆಯ ಅಂಜರ್ ತಾಲ್ಲೂಕಿನ ನಿಂಗಲ್ ಗ್ರಾಮದಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಸಾಧನೆ ಮಾಡಿರುವ ಮಗನ್‌ಭಾಯ್‌ ಅವರನ್ನು ಈ ವರ್ಷ ಸನ್ಮಾನಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು