ಬೆಂಗಳೂರು: 'ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ. ರವಿ ಅನ್ನೋ ಮತಿಗೆಟ್ಟ ಆಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ. ಲೋಕಾಯುಕ್ತ ಕೋರ್ಟ್ನಲ್ಲಿ 409, 420, 120, 463, 466, 120ಬಿ ಪ್ರಕರಣಗಳು ಇರುವುದೇಕೆ. ಲೂಟಿ ರವಿ ಉತ್ತರಿಸುವರೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

‘ಜನತೆ ಸಂಕಷ್ಟದಲ್ಲಿದ್ದಾರೆ. ಪ್ರತಿ ಕುಟುಂಬಕ್ಕೆ ₹ 10 ಸಾವಿರ ನೀಡಿ ಎನ್ನುವ ಸಿದ್ದರಾಮಯ್ಯ ಸಲಹೆಗೆ ಬುದ್ಧಿಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಸಿ.ಟಿ. ರವಿ ಅವರೇ, ಪಿಎಂ ಕೇರ್ಸ್, ಕೊರೊನಾ ಪ್ಯಾಕೇಜ್, ₹ 20 ಲಕ್ಷ ಕೋಟಿ ಪ್ಯಾಕೇಜ್ ಇವೆಲ್ಲಾ ಎಲ್ಲಿ ಹೋದವು ಎಂದು ಹೇಳಿ, ಇಲ್ಲವೇ ಅವೆಲ್ಲಾ ಬೋಗಸ್ ಎಂದು ಒಪ್ಪಿಕೊಳ್ಳಿ’

‘ಡಿಸಿಎಂ ಅಶ್ವತ್ಥನಾರಾಯಣ ಅವರೇ, ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕು ರಾಜ್ಯವನ್ನು ಕಾಡುತ್ತಿದೆ. ಒಂದು ವರ್ಷವಾದರೂ ಸೋಂಕನ್ನು ಎದುರಿಸುವ ಸಿದ್ಧತೆ ಇಲ್ಲದ್ದು ನಿಮ್ಮ ಬೇಜವಾಬ್ದಾರಿ ಅಲ್ಲವೇ. ಸಿದ್ದರಾಮಯ್ಯ ಹೇಳಿದಂತೆ ಪ್ಯಾಕೇಜ್ ಘೋಷಿಸಲಾಗುತ್ತದೆಯೇ ಎಂದು ಪ್ರಶ್ನೆ ಮಾಡುವ
ಮೂಲಕ ನಿಮ್ಮದು ಕೈಲಾಗದ ಸರ್ಕಾರ ಎಂಬುದನ್ನು ಒಪ್ಪಿ ಕೊಂಡಿದ್ದೀರಿ’ ಎಂದು ಲೇವಡಿ ಮಾಡಿದೆ.

ಸ್ಮಶಾನವಾಗುವತ್ತ: ‘ರಾಜ್ಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ, ವೈದ್ಯರ ಕೊರತೆ, ಆಂಬ್ಯುಲೆನ್ಸ್ ಕೊರತೆ, ಪಿಪಿಇ ಕಿಟ್ ಕೊರತೆ, ಬೆಡ್ಗಳಕೊರತೆ, ಐಸಿಯು ಕೊರತೆ, ಸ್ಮಶಾನದಲ್ಲಿ ಜಾಗದ ಕೊರತೆ, ಸರ್ಕಾರಕ್ಕೆ ಮನುಷ್ಯತ್ವದ ಕೊರತೆ. ರಾಜ್ಯ ಬಿಜೆಪಿ ಸರ್ಕಾರದ ಲಜ್ಜೆಗೆಟ್ಟ ಆಡಳಿತದಲ್ಲಿ ರಾಜ್ಯ ಸ್ಮಶಾನವಾಗುವತ್ತ ಸಾಗುತ್ತಿದೆ’ ಎಂದೂ ಕಾಂಗ್ರೆಸ್ ಟ್ವೀಟ್ನಲ್ಲಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.