ನನಗೆ ನನ್ನ ಪತ್ನಿ ಮಾತ್ರ ಗೊತ್ತು: ಸೋಮಣ್ಣ

ಬೆಂಗಳೂರು: ‘ರಾಗಿಣಿ, ಸಂಜನಾ ನನಗೆ ಗೊತ್ತಿಲ್ಲ. ನನ್ನ ಪತ್ನಿ ಬಿಟ್ಟು ಯಾರೂ ಗೊತ್ತಿಲ್ಲ. ಸಿನಿಮಾ ನಟಿಯರು ನನಗೆ ಗೊತ್ತಿಲ್ಲ. ‘ಬಂಧನ’ ಚಿತ್ರದ ಬಳಿಕ ನಾನು ಸಿನಿಮಾನವನ್ನೇ ನೋಡಿಲ್ಲ. ಡ್ರಗ್ಸ್ ವಿಚಾರದಲ್ಲಂತೂ ನಾನು ಝೀರೋ’ ಎಂದು ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ಡ್ರಗ್ಸ್ ವಿಚಾರ ಗಂಭೀರವಾದುದು. ಯಾರೇ ಅದರಲ್ಲಿ ಭಾಗಿಯಾದರೂ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು, ಎಲ್ಲವೂ ಹೊರಗೆ ಬರಲಿದೆ ಎಂದರು.
ವಿಜಯೇಂದ್ರ ಯಡಿಯೂರಪ್ಪ ವಿರುದ್ಧದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಅವರ ಮಗನಾಗಲು ವಿಜಯೇಂದ್ರ ಅರ್ಜಿ ಸಲ್ಲಿಸಿರಲಿಲ್ಲ. ಅಧಿಕಾರದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿಯೇ ಕಲ್ಲು ಹೊಡೆಯುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.