ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲುಮೆಗೆ ಗುರುತಿನ ಚೀಟಿ: ಮೂವರು ಅಮಾನತು

Last Updated 21 ನವೆಂಬರ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ ಇಬ್ಬರು ಕಂದಾಯ ಅಧಿಕಾರಿ ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿಸೇರಿದಂತೆ ಮೂವರನ್ನು ಬಿಬಿಎಂಪಿಮುಖ್ಯ ಆಯುಕ್ತರುಅಮಾನತುಮಾಡಿದ್ದಾರೆ.

ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್‌ ಅಹಮದ್‌,ಮಹದೇವ ಪುರದಕಂದಾಯ ಅಧಿಕಾರಿಕೆ. ಚಂದ್ರಶೇಖರ್‌ ಹಾಗೂ ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿವಿ.ಬಿ. ಭೀಮಾಶಂಕರ್‌ ಅವರು ಮತದಾರರ ನೋಂದಣಾಧಿ ಕಾರಿಯಾಗಿಕಾರ್ಯನಿರ್ವಹಿಸಿದ್ದರು. ಅವರನ್ನು ಸೋಮವಾರ (ನ.21)ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಶಿವಾಜಿನಗರ ಕ್ಷೇತ್ರದಲ್ಲಿ ಚಿಲುಮೆಪ್ರತಿನಿಧಿಗಳ ಮನವಿ ಮೇರೆಗೆ ಚಂದ್ರಶೇಖರ್‌ ಅವರಿಗೆ 14 ಮತಗಟ್ಟೆಮಟ್ಟದ ಸಂಯೋಜಕ (ಬಿಎಲ್‌ಸಿ) ಗುರುತಿನ ಚೀಟಿಗಳನ್ನು ಸುಹೇಲ್‌ ವಿತರಿಸಿದ್ದಾರೆ. ಆದರೆಸಂಸ್ಥೆಯವರುಒಂದು ದಿನವೂಕ್ಷೇತ್ರವ್ಯಾಪ್ತಿ
ಯಲ್ಲಿಜನಜಾಗೃತಿ ಮೂಡಿಸುವ ಅಥವಾ ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಕಾರ್ಯ, ತಿದ್ದುಪಡಿ, ಸೇರ್ಪಡೆ ಕಾರ್ಯ ಮಾಡಿಲ್ಲ. ಗುರುತಿನ ಚೀಟಿಹಿಂದಿರುಗಿಸಿಲ್ಲ. ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿವಿತರಿಸಿರುವುದರಿಮದಸುಹೇಲ್‌ ಅವರನ್ನುಅಮಾನತುಗೊಳಿಸಲಾಗಿದೆ.

ಮಹದೇವಪುರವಿಧಾನಸಭೆ ಕ್ಷೇತ್ರ ದಲ್ಲಿ ಚಿಲುಮೆ ಸಂಸ್ಥೆಯ ಲೋಕೇಶ್‌ಕೆ.ಎಂ. ಅವರಿಗೆ ಮತದಾರರ ನೋಂದಣಾಧಿಕಾರಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಗುರುತಿನ ಚೀಟಿ ನೀಡಿದ್ದಾರೆ. ಈ ಬಗ್ಗೆ ಜಂಟಿ ಮುಖ್ಯ ಚುನಾವಣಾಅಧಿಕಾರಿ ಪತ್ರ ಬರೆದಿದ್ದರು.

ಅದರಂತೆ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಲೋಕೇಶ್‌ ಮೇಲೆ ದೂರು ನೀಡಲಾಗಿತ್ತು. ಖಾಸಗಿ ಮಾಹಿತಿ ಸಂಗ್ರಹಿಸಿರುವ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಈ ಪ್ರಕರಣವು ಮಹದೇವ ಪುರವಿಧಾನಸಭೆ ಕ್ಷೇತ್ರದ ವ್ಯಾ‍‍ಪ್ತಿ ಯಲ್ಲಿ ನಡೆದಿರುವುದರಿಂದಕೆ. ಚಂದ್ರ ಶೇಖರ್‌ ಅವರನ್ನು ಅಮಾನತು
ಮಾಡಲಾಗಿದೆ.

ಚಿಕ್ಕಪೇಟೆವಿಧಾನಸಭೆ ಕ್ಷೇತ್ರದಲ್ಲಿ ಚಿಲುಮೆ ಸಂಸ್ಥೆಯ ಪ್ರತಿನಿಧಿ ಶಿವಕುಮಾರ್‌ ಹಾಗೂ ಪುನೀತ್‌, ಪಾಲಿಕೆ ಸಿಬ್ಬಂದಿಯೊಂದಿಗೆ ಜಾಗೃತಿ ಕಾರ್ಯದಲ್ಲಿ ತೊಡಗಿದ್ದರು. ಅವರೂ ಅನುಮತಿ ಹಾಗೂ ಬಿಎಲ್‌ಸಿ ಗುರುತಿನ ಚೀಟಿ ಕೋರಿದ್ದರು. ಅದನ್ನು
ನೀಡಿಲ್ಲ ಎಂದು ಚಿಕ್ಕಪೇಟೆಸಹಾಯಕ ಕಂದಾಯ ಅಧಿಕಾರಿ ವರದಿ ನೀಡಿದ್ದಾರೆ.‌

ಆದರೆ, ಗುರುಬಸ್ಸು, ವಿನಾಯಕ ಎಸ್‌.ಎಚ್‌. ಅವರಿಗೆ ಮತದಾರರ ನೋಂದಣಾಧಿಕಾರಿ ಬಿಎಲ್‌ಸಿ ಗುರುತಿನ ಚೀಟಿ ನೀಡಿರುವ ಪುರಾವೆ ಲಭ್ಯವಾಗಿದೆ. ಆದ್ದರಿಂದವಿ.ಬಿ. ಭೀಮಾಶಂಕರ್‌ ಅವರನ್ನುಅಮಾನತುಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಾತಿ, ಧರ್ಮದ ಆಧಾರದಲ್ಲಿ ಕೆಲಸ ಮಾಡುವುದಿಲ್ಲ’

‘ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಜಾತಿ ಅಥವಾ ಧರ್ಮದ ಆಧಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಅಥವಾ ಸೇರಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಲ್ಪಸಂಖ್ಯಾತರ ಹೆಸರುಗಳನ್ನು ಗುರುತಿಸಿ, ಕೈಬಿಡಲಾಗಿದೆ ಎಂಬ ಆರೋಪ ಕುರಿತು ಸ್ಪಷ್ಟನೆ ನೀಡಿರುವ ಅವರು, ‘ಮೃತ ವ್ಯಕ್ತಿಗಳು, ವಾಸ್ತವ್ಯ ಬದಲಿಸಿದವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಒಬ್ಬನೇ ಮತದಾರನ ಹೆಸರು ಇರುವುದನ್ನು ತಂತ್ರಾಂಶದ ಮೂಲಕ ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ’ ಎಂದು ಹೇಳಿದ್ದಾರೆ. 2023ರ ಕರಡು ಮತದಾರರ ಪಟ್ಟಿಯನ್ನು ಇದೇ 11ರಂದು ಪ್ರಕಟಿಸಲಾಗಿದೆ. ನಮೂನೆ–5ರ ಅಡಿಯಲ್ಲಿ ಮತದಾರರ ನೋಂದಣಿ ಅಧಿಕಾರಿಗೆ ಆಕ್ಷೇಪಣೆ ಮತ್ತು ದೂರು ಸಲ್ಲಿಸಲು ಡಿಸೆಂಬರ್‌ 8ರವರೆಗೂ ಕಾಲಾವಕಾಶ ನೀಡಲಾಗಿದೆ. ಎಲ್ಲ ಮತದಾರರು ಕರಡು ಪಟ್ಟಿಯನ್ನು ಪರಿಶೀಲಿಸಿ ಹೆಸರಿನಲ್ಲಿ ಬದಲಾವಣೆ, ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ಮತ್ತಿತರ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು. nvsp.in ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅಥವಾ ವೋಟರ್‌ ಹೆಲ್ಪ್‌ಲೈನ್‌ ಅಪ್ಲಿಕೇಷನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ನೋಂದಣಿ ಅಧಿಕಾರಿ ಅಥವಾ ಮತಗಟ್ಟೆ ಹಂತದ ಅಧಿಕಾರಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಅಕ್ರಮ: ತನಿಖೆ ಅಧಿಕಾರ ಸರ್ಕಾರಕ್ಕಿಲ್ಲ

ಬೆಂಗಳೂರು: ಚುನಾವಣೆಗೆ ಸಂಬಂಧಿಸಿದ ಆರೋಪಗಳು, ಅಕ್ರಮಗಳ ಕುರಿತು ತನಿಖೆಗೆ ಆದೇಶಿಸುವ ಅಧಿಕಾರ ಯಾವುದೇ ಸರ್ಕಾರಕ್ಕೆ ಇರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಸ್ಪಷ್ಟಪಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಸಂಸ್ಥೆಯ ಮೂಲಕ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ 2013ರಿಂದಲೂ ತನಿಖೆ ನಡೆಸುವಂತೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಸಿಇಸಿ ಪ್ರತಿನಿಧಿಯಾಗಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸೋಮವಾರ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದು, ‘ಚುನಾವಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ತನಿಖೆಗೆ ಆದೇಶಿಸುವ ಅಧಿಕಾರ ಯಾವುದೇ ಸರ್ಕಾರಕ್ಕೂ ಇಲ್ಲ’ ಎಂದು ತಿಳಿಸಿದ್ದಾರೆ.

ಖಾಸಗಿ ಸಂಸ್ಥೆಯೊಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ತಮ್ಮ ಕಚೇರಿಯು ಗುರುವಾರ (ನವೆಂಬರ್‌ 17) ತನಿಖೆಗೆ ಆದೇಶಿಸಿತ್ತು. ಅದೇ ದಿನ ಬೆಂಗಳೂರಿನ ಕಾಡುಗೋಡಿ ಮತ್ತು ಹಲಸೂರು ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ಕೇಂದ್ರ ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಪ್ರಜಾಪ್ರತಿನಿಧಿ ಕಾಯ್ದೆ–1950, ಮತದಾರರ ನೋಂದಣಿ ನಿಯಮಗಳು–1960 ಹಾಗೂ ಕೇಂದ್ರ ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಆಧರಿಸಿ ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಯು ಮತದಾರರ ಪಟ್ಟಿ ಸಿದ್ಧತೆ, ಪ್ರಕಟಣೆ ಮತ್ತು ಪರಿಷ್ಕರಣೆ ಪ್ರಕ್ರಿಯೆ ನಡೆಸುತ್ತಾರೆ. ಈ ಪ್ರಕ್ರಿಯೆಯು ನೇರವಾಗಿ ಕೇಂದ್ರ ಚುನಾವಣಾ ಆಯೋಗದ ಮೇಲುಸ್ತುವಾರಿ, ನಿರ್ದೇಶನ ಮತ್ತು ನಿಯಂತ್ರಣದಲ್ಲಿ ನಡೆಯುತ್ತದೆ’ ಎಂದು ಮೀನಾ ತಿಳಿಸಿದ್ದಾರೆ.

ಮತದಾರರ ಪಟ್ಟಿಯ ಸಿದ್ಧತೆ, ನಿರ್ವಹಣೆ ಮತ್ತು ಚುನಾವಣೆ ನಡೆಸುವ ಪ್ರಕ್ರಿಯೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಪಾತ್ರವನ್ನೂ ನಿರ್ವಹಿಸುವುದಿಲ್ಲ. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಾಗ, ಅಕ್ರಮಗಳು ನಡೆದರೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕೆ ಸೇರಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT