ಗುರುವಾರ , ಆಗಸ್ಟ್ 18, 2022
25 °C
ಭಾರತೀಯ ಸೇನೆ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ l ನಾಲ್ಕು ಕಡೆ ದಾಳಿ

ಕರೆ ಮಾರ್ಪಾಡು: ಐಎಸ್‌ಐ ಬೇಹುಗಾರಿಕೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಕಿಸ್ತಾನದಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ಇದರ ರೂವಾರಿ ಶರ್ಫುದ್ದೀನ್ ಎಂಬಾತನನ್ನು ಬಂಧಿಸ ಲಾಗಿದೆ.

‘ಕೇರಳದ ವಯನಾಡಿನ ಶರ್ಫುದ್ದೀನ್, ಕೆಲ ವರ್ಷಗಳ ಹಿಂದೆ ಯಷ್ಟೇ ನಗರಕ್ಕೆ ಬಂದು ಸಣ್ಣಪುಟ್ಟ ಕೆಲಸ ಮಾಡಲಾರಂಭಿಸಿದ್ದ. ಕೆಲವರ ಜೊತೆ ಸೇರಿ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುವ ಕೃತ್ಯದಲ್ಲಿ ತೊಡಗಿಸಿ
ಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಕೃತ್ಯವನ್ನು ಪತ್ತೆ ಮಾಡಿದ್ದ ಭಾರತೀಯ ಸೇನೆಯ ಇಂಟೆಲಿಜೆನ್ಸ್ ಅಧಿಕಾರಿಗಳು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೇನೆ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು, ಜಂಟಿಯಾಗಿ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ದ್ದಾರೆ’ ಎಂದೂ ತಿಳಿಸಿವೆ.

‘ಆರೋಪಿ ಕೃತ್ಯಕ್ಕಾಗಿ ಬಳುಸುತ್ತಿದ್ದ ಎಫ್‌ಸಿಟಿ (ಫಿಕ್ಸ್‌ಡ್ ಸೆಲ್ಯುಲರ್ ಟರ್ಮಿ ನಲ್) ಬಾಕ್ಸ್, 2,144 ಸಿಮ್ ಕಾರ್ಡ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಬೇಹುಗಾರಿಕೆ ಶಂಕೆ: ‘ಆರೋಪಿ ಶರ್ಫುದ್ದೀನ್‌ನನ್ನು ಬಳಸಿ ಕೊಂಡು ಪಾಕಿಸ್ತಾನ್ ಐಎಸ್‌ಐ, ದೇಶ ದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಯು ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಸಿಮ್‌ ಕಾರ್ಡ್‌ಗಳನ್ನು ಎಫ್‌ಟಿಸಿ ಬಾಕ್ಸ್, ಮೋಡೆಮ್‌ ಹಾಗೂ ರೂಟರ್‌ಗೆ ಜೋಡಿಸಿದ್ದ. ಇದೇ ಉಪಕರಣದ ಮೂಲಕ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿ ಕರೆಗಳಿಗೆ ಪರಿವರ್ತಿಸುತ್ತಿದ್ದ. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ಅನ್ವಯವಾಗುತ್ತಿತ್ತು. ಕೇಂದ್ರ ಸರ್ಕಾರಕ್ಕೂ ನಷ್ಟವಾಗುತ್ತಿತ್ತು’ ಎಂದು ಮಾಹಿತಿ ನೀಡಿವೆ.

‘ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳನ್ನು ಆರೋಪಿ ಮಾರ್ಪಾಡು ಮಾಡುತ್ತಿದ್ದ. ಐಎಸ್‌ಐ ಪ್ರತಿನಿಧಿಗಳು, ದೇಶದ ಕೆಲವರ ಜೊತೆ ಮಾತನಾಡುತ್ತಿದ್ದರು. ಭಾರತೀಯ ಸೇನೆ ಹಾಗೂ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದರೆಂಬ ಶಂಕೆ ಇದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಬೇಕಿದೆ’ ಎಂದೂ ಮೂಲಗಳು ಹೇಳಿವೆ.

‘ಬಾಡಿಗೆ ಮನೆಯಲ್ಲಿ ಎಫ್‌ಸಿಟಿ ಬಾಕ್ಸ್’

‘ಬಂಧಿತ ಶರ್ಫುದ್ದೀನ್ ಹಾಗೂ ಈತನ ಸಹಚರರು, ಕೃತ್ಯಕ್ಕೆಂದು ಬಾಡಿಗೆ ಮನೆ ಮಾಡಿದ್ದರು. ಅಲ್ಲಿಯೇ ಎಫ್‌ಸಿಟಿ ಬಾಕ್ಸ್ ಜೋಡಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಗರದ ಭುವನೇಶ್ವರಿನಗರ, ಚಿಕ್ಕಸಂದ್ರ ಹಾಗೂ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ಎಫ್‌ಸಿಟಿ ಬಾಕ್ಸ್‌ಗಳು ಸಿಕ್ಕಿವೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು