ಬುಧವಾರ, ಜೂನ್ 29, 2022
25 °C

ಜೆಡಿಎಸ್‌, ಟಿಎಂಸಿ, ಎಸ್‌ಪಿ... ನನ್ನ ಮುಂದಿರುವ 3 ಆಯ್ಕೆಗಳು: ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನನ್ನ ಮುಂದೆ ಸದ್ಯ ಜೆಡಿಎಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳೆಂಬ ಮೂರು ಆಯ್ಕೆಗಳಿವೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಭಾನುವಾರ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ‘ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ನಿರೀಕ್ಷೆಗಿಂತ ಎರಡರಷ್ಟು ಬೆಂಬಲ ಸಿಗುತ್ತಿದೆ. ಸದ್ಯಕ್ಕೆ ನನಗೆ ಜೆಡಿಎಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ ಎಂಬ ಮೂರು ಆಯ್ಕೆಗಳಿವೆ. ಟಿಎಂಸಿ ಮತ್ತು ಸಮಾಜವಾದಿ ಪಕ್ಷದವರು ನನ್ನನ್ನು ಸಂಪರ್ಕಿಸುತ್ತಿದ್ದಾರೆ.  ವಿಳಂಬ ಮಾಡುವುದಿಲ್ಲ. ಶೀಘ್ರವೇ ನಿರ್ಧಾರವನ್ನು ಪ್ರಕಟಿಸುತ್ತೇನೆ’ ಎಂದರು.

ಕರ್ನಾಟಕದಲ್ಲಿ ಚುನಾವಣೆಗೆ ಮುನ್ನವೇ ಅನೇಕರು ಕಾಂಗ್ರೆಸ್ ತೊರೆಯುತ್ತಾರೆ ಎಂದು ಅವರು ಹೇಳಿದರು. 

ಕೂಡಲಸಂಗಮದಿಂದ ‘ಅಲಿಂಗ’ (ಅಲ್ಪಸಂಖ್ಯಾತರು, ಲಿಂಗಾಯತ) ಸಮಾವೇಶ ಮಾಡಲಾಗುವುದು. ಅದು ಪಕ್ಷಾತೀತವಾಗಿ ನಡೆಯಲಿದ್ದು, ಸ್ವಾಮೀಜಿಗಳು, ಸೂಫಿ ಸಂತರು ಭಾಗವಹಿಸಲಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು