ಬುಧವಾರ, ಆಗಸ್ಟ್ 10, 2022
23 °C

ಕವಿ ಸಿದ್ಧಲಿಂಗಯ್ಯ ನಿಧನ: ಸಾರ್ವಜನಿಕರಿಂದ ಅಂತಿಮ ದರ್ಶನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜ್ಞಾನ ಭಾರತಿಯ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಆವರಣದಲ್ಲಿ ದಲಿತ ಕವಿ ಸಿದ್ಧಲಿಂಗಯ್ಯ ಅವರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. 

ನೂರಾರು ಜನ ಸ್ಥಳದಲ್ಲಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಬುದ್ಧನ ಪ್ರತಿಮೆ ಅಡಿ ಪಾರ್ಥಿವ ಶರೀರ ಇಡಲಾಗಿದೆ‌. ಸರದಿಯಲ್ಲಿ ಬಂದು ನಾಗರಿಕರು ಪುಷ್ಪನಮನ‌ ಸಲ್ಲಿಸುತ್ತಿದ್ದಾರೆ. 

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.‌ವೇಣುಗೋಪಾಲ, ಕುಲಸಚಿವರಾದ ಕೆ. ಜ್ಯೋತಿ, ಡಾ. ದೇವರಾಜ್, ಐಎಎಸ್ ಅಧಿಕಾರಿ ಕುಮಾರ ನಾಯ್ಕ್, ದಲಿತ ಮುಖಂಡ ಎಂ. ವೆಂಕಟಸ್ವಾಮಿ, ಪ್ರೊ. ಬಿ.ಕೆ.ರವಿ, ಪ್ರೊ. ಜಾಫೆಟ್ ಮತ್ತಿತರ ಗಣ್ಯರು ಇದ್ದಾರೆ. 

ಸಿದ್ಧಲಿಂಗಯ್ಯನವರ ನಿವಾಸದಿಂದ ಪಾರ್ಥಿವ ಶರೀರವನ್ನು ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ  10.50ಕ್ಕೆ ತರಲಾಯಿತು. ಒಂದು ತಾಸು ಇಲ್ಲಿ ಇಡಲಾಗುತ್ತದೆ.‌ ನಂತರ ಕಲಾಗ್ರಾಮದಲ್ಲಿ ಬೌದ್ಧ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು