ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗಿ: ಸಿದ್ದು ವಿರುದ್ಧ ಬಿಜೆಪಿ

Last Updated 11 ಫೆಬ್ರುವರಿ 2023, 6:44 IST
ಅಕ್ಷರ ಗಾತ್ರ

ಬೆಂಗಳೂರು: ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಅವರು ಶುಕ್ರವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಗೈರಾಗಿದ್ದರು. ಇದೇ ವಿಚಾರಕ್ಕೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ಕಲ್ಬುರ್ಗಿಯಲ್ಲಿ ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ. ಅಂದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ತಿರಸ್ಕೃತಗೊಂಡಿರುವ ಬಗ್ಗೆ ಸಾಕ್ಷಿ ಕಲೆಹಾಕಲು ಯಾತ್ರೆ ನಡೆಸಬೇಕೆಂದಿರಲಿಲ್ಲ’ ಎಂದು ಲೇವಡಿ ಮಾಡಿದೆ.

‘ನಾಡಭಾಷೆ ಕನ್ನಡವನ್ನು ತಿರಸ್ಕರಿಸಿ ಉರ್ದುವಿನಲ್ಲೇ ಭಾಷಣ ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್ ಕುಸಿಯುತ್ತಿರುವುದು, ಹುಂಬತನ ಪ್ರದರ್ಶಿಸುತ್ತಿರುವುದು ಅಚ್ಚರಿಯೇನಲ್ಲ. ಇಷ್ಟಕ್ಕೂ ಪ್ರಜಾದ್ರೋಹ ಯಾತ್ರೆಯ ಸಭೆಗಳಲ್ಲಿ ಸೇರುತ್ತಿದ್ದ ಅಪಾರ ಪ್ರಮಾಣದ ‘ಖಾಲಿ ಕುರ್ಚಿ’ಗಳಿಗೆ ಯಾವ ಭಾಷೆಯಲ್ಲಿ ಸಂಬೋಧಿಸಿದರೇನು’ ಎಂದು ಬಿಜೆಪಿ ಪ್ರಶ್ನಿಸಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಧ್ಯದ ವಾಕ್ಸಮರ ತಾರಕಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT