ಶನಿವಾರ, ಜುಲೈ 2, 2022
25 °C
ಹಾವೇರಿಯ 35, ವಿಜಯನಗರದ 23 ಮನೆಗಳಿಗೆ ಹಾನಿ

ಮಳೆ ಜೋರು: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಧಾರವಾಡ– ಹುಬ್ಬಳ್ಳಿ, ಗದಗ, ಹಾವೇರಿ, ವಿಜಯನಗರ, ಬೆಳಗಾವಿ, ಉತ್ತರ ಕನ್ನಡ, ಬಾಗಲ
ಕೋಟೆ, ವಿಜಯಪುರ ಜಿಲ್ಲೆಗಳ ವಿವಿಧೆಡೆ ಬುಧವಾರ ತಡರಾತ್ರಿ ಹಾಗೂ ಗುರುವಾರ ನಿರಂತರವಾಗಿ ಮಳೆಯಾಗಿದೆ.

ಮಳೆಯಿಂದ ವಿಜಯನಗರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಸುರಿದ ಬಿರುಸಿನ ಮಳೆಗೆ 23 ಮನೆಗಳಿಗೆ ಹಾನಿಯಾಗಿದೆ. ಅಂದಾಜು 250 ಎಕರೆ ಭತ್ತ ನಾಶವಾಗಿವೆ. ಅರಸೀಕೆರೆ ಹೋಬಳಿಯ ಸುತ್ತಮುತ್ತಲ ಚೆಕ್ ಡ್ಯಾಂಗಳು ತುಂಬಿದ್ದು ಮಳೆಯಲ್ಲಿಯೇ ಗ್ರಾಮಸ್ಥರು ಮೀನು ಹಿಡಿಯುತ್ತಿದ್ದ ದೃಶ್ಯ ಕಂಡುಬಂತು.  

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನಲ್ಲಿ 45 ಮನೆಗಳಿಗೆ, ಹಾವೇರಿ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು