ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆ ಪ್ರಕರಣ

ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದ್ದು, ಕಳೆದ 55 ದಿನಗಳಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ 10 ಸಾವಿರಕ್ಕಿಂತ (9,808) ಕಡಿಮೆ ಸಂಖ್ಯೆಯ ಪ್ರಕರಣ ಮಂಗಳವಾರ ವರದಿಯಾಗಿದೆ.

ಕಳೆದ ಏ.14ರಂದು ಪ್ರಕರಣ ಗಳ ಸಂಖ್ಯೆ 10 ಸಾವಿರದ ಗಡಿ ದಾಟಿತ್ತು. ಬಳಿಕ ಏರುಗತಿ ಪಡೆದು, 50 ಸಾವಿರದ ಗಡಿಯ ಆಸುಪಾಸಿಗೆ ಏರಿಕೆ ಕಂಡಿತ್ತು. ಈಗ ಎರಡು ವಾರಗಳಿಂದ ಇಳಿಮುಖ ಕಂಡಿದ್ದು, ಸೋಂಕು ದೃಢ ಪ್ರಮಾಣವು ಶೇ 7.53 ರಷ್ಟು ವರದಿಯಾಗಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 27.17 ಲಕ್ಷ ದಾಟಿದೆ.

ರಾಜ್ಯದಲ್ಲಿ ಕೋವಿಡ್‌ ಮೃತರ ಸಂಖ್ಯೆ ದಿಢೀರ್‌ ಇಳಿಕೆ ಕಂಡಿದೆ. ಮಂಗಳವಾರ 179 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ದರ ಶೇ 1.85ಕ್ಕೆ ಕುಸಿ ದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.25 ಲಕ್ಷಕ್ಕೆ ಇಳಿದಿದೆ.

ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಬಹುತೇಕ ಜಿಲ್ಲೆಗಳಲ್ಲಿ ಇಳಿಮುಖ ಕಂಡಿದೆ. ಬೆಂಗಳೂರಿನಲ್ಲಿ ಹೊಸದಾಗಿ 2,028 ಮಂದಿ ಸೋಂಕಿತರಾಗಿದ್ದಾರೆ. ಮೈಸೂರು (974), ಶಿವಮೊಗ್ಗ (703) ಹಾಗೂ ತುಮಕೂರಿನಲ್ಲೂ (589) ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಏಳು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿದಿದೆ.

ಬೆಂಗಳೂರಿನಲ್ಲಿ 44 ಮಂದಿ ಮೃತಪಟ್ಟಿದ್ದಾರೆ. ಸೋಮವಾರಕ್ಕೆ (199) ಹೋಲಿಸಿದರೆ ಇದು ನಾಲ್ಕು ಪಟ್ಟು ಕಡಿಮೆ. ಹಾವೇರಿ (11), ಮೈಸೂರು (15) ಹಾಗೂ ಶಿವಮೊಗ್ಗ (10) ಬಿಟ್ಟು ಉಳಿದೆಲ್ಲಾ ಜಿಲ್ಲೆಗಳಲ್ಲೂ ಮೃತರ ಸಂಖ್ಯೆ ಒಂದಂಕಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT