ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರು ನನ್ನನ್ನು ಹೆದರಿಸಲು ಮುಂದಾಗಿದ್ದಾರೆ, ಯಾವ ತನಿಖೆಗೂ ಹೆದರಲ್ಲ: ಡಿಕೆಶಿ

Last Updated 16 ಸೆಪ್ಟೆಂಬರ್ 2022, 4:32 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್ ಪಕ್ಷ ಮತ್ತು ನನ್ನನ್ನು ಹೆದರಿಸಲು ಬಿಜೆಪಿಯವರು ಮುಂದಾಗಿದ್ದಾರೆ. ನಾನು ಯಾವುದಕ್ಕೂ ಹೆದರುವವನಲ್ಲ. ಯಾವ ತನಿಖೆಯಾ ದರೂ ಮಾಡಿಕೊಳ್ಳಲಿ’ ಎಂದು ಕೆ‍‍‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ ಇ.ಡಿ ಮೂಲಕ ಸಮನ್ಸ್‌ ಕೊಡಿಸಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಅವಧಿಯಲ್ಲಿನ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿ ಸಲು ಇಂಧನ ಇಲಾಖೆ ಅಧಿಕಾರಿಗಳ ಮೇಲೆಸರ್ಕಾರ ಒತ್ತಡ ಹೇರುತ್ತಿದೆ. ಎಲ್ಲ ದಾಖಲೆಗಳ‌ನ್ನೂ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ತಪ್ಪು ಸಾಬೀತಾದರೆ ನೇಣು ಹಾಕಲಿ’ ಎಂದರು. ‘ತನಿಖೆ ಆರಂಭಿಸಲು ಅವರಿಗೆ (ಬಿಜೆಪಿಯವರಿಗೆ) 3 ವರ್ಷ ಬೇಕಿತ್ತಾ?. ನಾವು ದಾಖಲೆ ಮುಚ್ಚಿಟ್ಟಿದ್ದೇವೆ ಎಂದು ಆರೋಪಿಸಿದ್ದಾರೆ. ಹಾರೆಯಿಂದಲೋ, ಜೆಸಿಬಿಯಿಂದಲೋ ಅಗೆದು ಹೊರ ತೆಗೆಯಲಿ ಬಿಡಿ’ ಎಂದು ಹೇಳಿದರು.

ಬದನವಾಳುವಿಗೆ ಡಿಕೆಶಿ ಭೇಟಿ: ಭಾರತ್‌ ಜೋಡೋ ಯಾತ್ರೆ ನಿಮಿತ್ತ ಅ.2ರಂದು ಸಂಸದ ರಾಹುಲ್‌ ಗಾಂಧಿ ಭೇಟಿ ನೀಡ ಲಿರುವ ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT