ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಣೆಕ್ ಶಾ ಮೈದಾನ: ರಾಣಿ ಚನ್ನಮ್ಮ, ಟಿಪ್ಪು ಹೆಸರಿಗೆ ಸುಣ್ಣ ಬಳಿದ ಸರ್ಕಾರ

ಮಾಣೆಕ್‌ ಶಾ ಮೈದಾನದಲ್ಲಿನ ದ್ವಾರಗಳಿಗೆ ಸುಣ್ಣ ಬಳಿದ ಸರ್ಕಾರ
Last Updated 18 ಆಗಸ್ಟ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾಣೆಕ್ ಶಾ ಮೈದಾನದಲ್ಲಿನ ಎರಡು ದ್ವಾರಗಳಿಗೆ ನಾಮಕರಣ ಮಾಡಲಾಗಿದ್ದ ರಾಣಿ ಚನ್ನಮ್ಮ ಮತ್ತು ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಿ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮಾಣೆಕ್‌ ಶಾ ಮೈದಾನದಲ್ಲಿ ಪ‍್ರತಿ ವರ್ಷ ಸಂಭ್ರಮದಿಂದ ನಡೆಯುವ ಸ್ವಾತಂತ್ರ್ಯ ದಿನಕ್ಕೆ ಬಿಬಿಎಂಪಿ ಮತ್ತು ಜಿಲ್ಲಾಡಳಿತ ಈ ಮೈದಾನವನ್ನು ಸಿದ್ಧಪಡಿಸುತ್ತವೆ. ಟಿಪ್ಪು ಸುಲ್ತಾನ್‌ ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರುಗಳನ್ನು ಕೋಟೆ ಮಾದರಿ ದ್ವಾರಗಳಿಗೆ ಇರಿಸಲಾಗಿತ್ತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಅಳಿಸಿ ಹಾಕಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

‘ಟಿಪ್ಪು ಸುಲ್ತಾನ್‌ ದ್ವಾರ ಮತ್ತು ರಾಣಿ ಚನ್ನಮ್ಮ ದ್ವಾರ’ ಎನ್ನುವ ಹೆಸರುಗಳಿಗೆ ಸುಣ್ಣ ಬಳಿಯಲಾಗಿದೆ.ಬಿಬಿಎಂಪಿ ಮತ್ತು ಜಿಲ್ಲಾಡಳಿತ ಸ್ವಾತಂತ್ರ್ಯ ಹೋರಾಟಗಾರರಿಗೆಅವಮಾನ ಮಾಡಿದೆ’ ಎಂದು ದೂರಿದೆ.

‘ಮಾಣೆಕ್ ಶಾ ಪರೇಡ್‌ ಮೈದಾನದಲ್ಲಿ ಎರಡು ದ್ವಾರಗಳಿಗೆ ಇದ್ದ ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಲಾಗಿದೆ.ಧ್ವಜಾರೋಹಣಕ್ಕೂ ಮೊದಲಿದ್ದ ಹೆಸರುಗಳನ್ನು ಅಳಿಸಿ ಹಾಕಿದ್ದೇಕೆ ಬಸವರಾಜ ಬೊಮ್ಮಾಯಿ ಅವರೇ’ ಎಂದು ಕಾಂಗ್ರೆಸ್‌ ಟ್ವೀಟ್‌ಮಾಡಿದೆ.

‘ರಾಜ್ಯದ ಮಹನೀಯರ ಬಗ್ಗೆ ಏಕಿಷ್ಟು ಅಸಹನೆ? ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗಿರುವ ಪ್ರಾಮುಖ್ಯ ರಾಜ್ಯದ ಹೋರಾಟಗಾರರಿಗೆ ಏಕಿಲ್ಲ’ ಎಂದೂ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT