ಸೋಮವಾರ, ಸೆಪ್ಟೆಂಬರ್ 26, 2022
22 °C

ಮಂತ್ರಾಲಯ: ರಾಯರ ವೈಭವದ ಪೂರ್ವಾರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಘವೇಂದ್ರ ಸ್ವಾಮಿಯವರ 351ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಮಂತ್ರಾಲಯದಲ್ಲಿ ಶುಕ್ರವಾರ ಪೂರ್ವಾರಾಧನೆಯು ವೈಭವದಿಂದ ನೆರವೇರಿತು. 

ರಾಯರ ಮೂಲ ವೃಂದಾವನಕ್ಕೆ ವಿಶೇಷ ಪೂಜೆ, ಮಹಾಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ವಸ್ತ್ರಾಲಂಕಾರವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಧಿವತ್ತಾಗಿ ನೆರವೇರಿಸಿದರು.

ಮೂಲರಾಮದೇವರ ಪೂಜೆ, ಮಂಗಳಾರತಿ ನಡೆಯಿತು. ಪ್ರಾಕಾರದಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮಠದ ಹೊರಭಾಗ ಸಂಜೆ ಯೋಗೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 10 ವಿದ್ವಾಂಸರಿಗೆ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಬೆಂಗಳೂರಿನ ವಿದ್ವಾನ್‌ ಮಳಗಿ ರಾಮಾಚಾರ್‌, ಮೈಸೂರಿನ ವಿದ್ವಾನ್‌ ಸಿ.ಎಚ್‌.ಶ್ರೀನಿವಾಸಮೂರ್ತಿ ಮತ್ತು ಹುಬ್ಬಳ್ಳಿಯ ಹೃದ್ರೋಗ ತಜ್ಞ ಡಾ.ವಿ.ಜಿ.ನಾಡಗೌಡ ಸೇರಿ ದೇಶದ ವಿವಿಧ ರಾಜ್ಯಗಳ ವಿದ್ವಾಂಸರು ಪ್ರಶಸ್ತಿ ಸ್ವೀಕರಿಸಿದರು. ರಾಯರ ಮಧ್ಯಾರಾಧನೆ ದಿನವಾದ ಶನಿವಾರ, ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಅರ್ಚಕರು ಶೇಷವಸ್ತ್ರದೊಂದಿಗೆ ಮಂತ್ರಾಲಯಕ್ಕೆ ಬರುವರು. ರಾಯರಿಗೆ ಸಮರ್ಪಿಸಲು ಸುಬುಧೇಂದ್ರ ತೀರ್ಥರಿಗೆ ಶೇಷವಸ್ತ್ರ ನೀಡುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು