ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮತ್ತು ಉತ್ತರ ಕರ್ನಾಟಕದ ಕೆಲವು ಕಡೆ ಗುರುವಾರ ಸಾಧಾರಣ ಮಳೆ ಆಗಿದೆ.

ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹೊಲದಲ್ಲಿ ನೀರು ನಿಂತು, ಬೆಳೆ ಹಾನಿಯಾಗಿದೆ. ಉತ್ತರ ಕನ್ನಡದ ಶಿರಸಿ, ಹುಬ್ಬಳ್ಳಿ–ಧಾರವಾಡ, ಬೆಳಗಾವಿಯ ಖಾನಾಪುರ, ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.

ಇಂದಿನಿಂದ ತಲಕಾವೇರಿಯಲ್ಲಿ ಪೂಜೆ
ಮಡಿಕೇರಿ:
ತಲಕಾವೇರಿಯಲ್ಲಿ ಶುಕ್ರವಾರದಿಂದ ನಿತ್ಯದ ಪೂಜೆ ಆರಂಭಿಸಲು ಭಾಗಮಂಡಲ– ತಲಕಾವೇರಿ ವ್ಯವಸ್ಥಾಪನಾ ಸಮಿತಿ ಸಿದ್ಧತೆ ನಡೆಸಿದೆ. ಬೆಟ್ಟ ಕುಸಿತದ ದುರಂತದಲ್ಲಿ  ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್‌ ಮೃತಪಟ್ಟಿದ್ದರಿಂದ ವಾರದಿಂದ ಪೂಜೆ ನಡೆದಿರಲಿಲ್ಲ. ವಿವಿಧ ಗ್ರಾಮದ ಯುವಕರು ಗುರುವಾರ ಕ್ಷೇತ್ರಕ್ಕೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಿದರು.

ಶಾಸಕ ಕೆ.ಜಿ.ಬೋಪಯ್ಯ ಸಹ ತಲಕಾವೇರಿಗೆ ಬಂದು ವ್ಯವಸ್ಥೆ ‍ಪರಿಶೀಲಿಸಿದರು. ಕೇರಳದ ತಂತ್ರಿಯ ನೇತೃತ್ವದಲ್ಲಿ ಪೂಜೆ ಆರಂಭಗೊಳ್ಳಲಿದೆ. ಬೆಟ್ಟ ಕುಸಿತದಿಂದ ಕಣ್ಮರೆಯಾದ ಮೂವರ ಸುಳಿವು ಎಂಟು ದಿನ ಕಳೆದರೂ ಸಿಕ್ಕಿಲ್ಲ. ಶೋಧ ಕಾರ್ಯ ಮುಂದುವರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು