ಸೋಮವಾರ, ಅಕ್ಟೋಬರ್ 18, 2021
25 °C

ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರ ಪೈಕಿ ಇಬ್ಬರಿಗೆ ಹೆಣ್ಣು, ಹಣದ ಚಪಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಬಂಧಿತರ ಪೈಕಿ ಇಬ್ಬರು ಆರೋಪಿಗಳು ಮಹಿಳೆಯರನ್ನು ವಿಕೃತವಾಗಿ ಹಿಂಸಿಸುವುದನ್ನೇ ರೂಢಿ ಮಾಡಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ. 

ಇದನ್ನೂ ಓದಿ: ಮೈಸೂರಿಗೆ ಬಂದಾಗಲೆಲ್ಲಾ ಅತ್ಯಾಚಾರ, ದರೋಡೆ ನಡೆಸುತ್ತಿದ್ದ ಆರೋಪಿಗಳು!

ಉಳಿದವರು ಹಣ, ಒಡವೆ ದರೋಡೆ ಮಾಡುತ್ತಿದ್ದ ಅಂಶ ಗೊತ್ತಾಗಿದೆ. ಅತ್ಯಾಚಾರದ ವಿಡಿಯೊ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಗಳು, ಅವರನ್ನು ಬೆದರಿಸುತ್ತಿದ್ದರು.  ಹಲವು ಮಂದಿ ಗೂಗಲ್‌ಪೇ ಮೂಲಕ ಇವರಿಗೆ ಹಣ ಪಾವತಿಸುತ್ತಿದ್ದರು. ಆರೋಪಿಗಳ ವಿರುದ್ಧ ಗಂಧದ ಮರ ಕಳವು ಹಾಗೂ ಕೊಲೆ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತುಮಕೂರು| ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ವಾರವಾದರೂ ಆರೋಪಿಗಳ ಸುಳಿವಿಲ್ಲ

‘ಹಗಲಿನಲ್ಲಿ ನಿದ್ರಿಸುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಕಳ್ಳತನ, ದರೋಡೆಗೆ ಇಳಿಯುತ್ತಿದ್ದರು. ತಾಳವಾಡಿ ಸೇರಿದಂತೆ ತಮಿಳುನಾಡಿನ ಇತರೆ ಭಾಗಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು’ ಎಂದು ತಾಳವಾಡಿ ನಿವಾಸಿಯೊಬ್ಬರು ಹೇಳುತ್ತಾರೆ.

ಕೂದಲು,  ಚರ್ಮದ ಪರೀಕ್ಸೆ:  ಆರೋಪಿಗಳ ಕೂದಲು, ಚರ್ಮ ಮೊದಲಾದ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅತ್ಯಾಚಾರ ನಡೆಸಿದ ತಂಡದಲ್ಲಿ 7 ಮಂದಿ ಇರುವುದಾಗಿ ತನಿಖೆ ವೇಳೆ ಒಬ್ಬಾತ ಹೇಳಿದ್ದು, ಆತನ ಪತ್ತೆಗೆ ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.

ಆರೋಪಿಗಳಲ್ಲಿ ಬಾಲ ಆರೋಪಿಗಳೂ ಇದ್ದು, ಅವರ ವಯಸ್ಸಿನ ದೃಢೀಕರಣ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ತಾಯಿಯ ಕಣ್ಣೀರು:  ‘ಪೊಲೀಸರು ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿ ಮಗನನ್ನು ಎಳೆದು ಕೊಂಡು ಹೋದರು. ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಆತನ ಬಂಧನದಿಂದ ದಿಕ್ಕು ತೋಚದಂತಾಗಿದೆ’ ಎಂದು ತಮಿಳುನಾಡಿನ ತಾಳವಾಡಿಯಲ್ಲಿ ಆರೋಪಿಯೊಬ್ಬನ ತಾಯಿ ಕಣ್ಣೀರು ಹಾಕಿದ್ದಾರೆ.ಮತ್ತೊಬ್ಬ ಆರೋಪಿಯ ಕುಟುಂಬದ ವರು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು