ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ, ಬೀದರ್‌ನಲ್ಲಿ ಎನ್‌ಸಿಬಿ ದಾಳಿ: 91 ಕೆ.ಜಿ ಡ್ರಗ್ಸ್, ₹62 ಲಕ್ಷ ನಗದು ವಶ

Last Updated 26 ಜೂನ್ 2021, 5:42 IST
ಅಕ್ಷರ ಗಾತ್ರ

ಬೆಂಗಳೂರು: ಕೋಲಾರ ಹಾಗೂ ಬೀದರ್‌ನಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 91 ಕೆ.ಜಿ ಡ್ರಗ್ಸ್ ಹಾಗೂ ₹ 62 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಕೋಲಾರ ಕೈಗಾರಿಕಾ ಪ್ರದೇಶದ ಕಾರ್ಖಾನೆ, ಬೀದರ್ ಕಾರ್ಖಾನೆ ಹಾಗೂ ಮನೆಗಳ ಮೇಲೆ ಎನ್‌ಸಿಬಿ ದಾಳಿ‌ ಮಾಡಿದೆ.

ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಹೈದರಾಬಾದ್ ಎನ್.ವಿ ರೆಡ್ಡಿ ಎಂಬಾತನಿಗೆ ಸೇರಿದ್ದ ಕಾರ್ಖಾನೆ ಇದಾಗಿತ್ತು.

ಬೀದರ್ ಕೈಗಾರಿಕೆಯಲ್ಲಿ ಡ್ರಗ್ಸ್ ಉತ್ಪಾದಿಸಲಾಗುತ್ತಿತ್ತು. ಆರೋಪಿ ಎನ್.ವಿ. ರೆಡ್ಡಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಆತನ ನಿವಾಸದ ಮೇಲೂ ದಾಳಿ ಮಾಡಿ ₹ 62 ಲಕ್ಷ ನಗದು ಜಪ್ತಿ‌ಮಾಡಲಾಗಿದೆ.

ಪ್ರಕರಣದಲ್ಲಿ ವೈ.ವಿ. ರೆಡ್ಡಿ, ಎಸ್. ಮೆನನ್, ಎನ್.ವಿ. ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ವಲಯದ ಎನ್.ಸಿ.ಬಿ ವಲಯಾಧಿಕಾರಿ ಅಮಿತ್ ಗಾವಟೆ ನೇತೃತ್ವದಲ್ಲಿ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT