ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗಲಿಲ್ಲ ಉಚಿತ ಊಟ

ಕಲಬುರ್ಗಿ ಮಹಾನಗರಪಾಲಿಕೆಯಿಂದ ₹ 7.5ಕೋಟಿ ಬಾಕಿ
Last Updated 12 ಮೇ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‌ಡೌನ್‌ ಸಂದರ್ಭ ದಲ್ಲಿನಿರ್ಗತಿಕರು, ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ಕೊಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೊದಲ ದಿನಈ ಆದೇಶ ಪಾಲನೆಯಾಗಲಿಲ್ಲ.

ಕಲಬುರ್ಗಿ ನಗರದ 7 ಇಂದಿರಾ ಕ್ಯಾಂಟೀನ್‌ಗಳಲ್ಲಿ ರಿಯಾಯಿತಿ ದರದಂತೆ ಹಣ ಪಡೆದೇ ಊಟ, ಉಪಾಹಾರ ನೀಡುತ್ತಿರುವುದು ‘ಪ್ರಜಾವಾಣಿ’ ಪ್ರತಿನಿಧಿ ಕೆಲವು ಕ್ಯಾಂಟೀನ್‌ಗಳಿಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದಾಗ ಕಂಡು ಬಂತು.

‘ಕಲಬುರ್ಗಿ ಮಹಾನಗರ ಪಾಲಿಕೆ 19 ತಿಂಗಳಿಂದ₹ 7.5 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅದು ಪಾವತಿ ಆಗುವವರೆಗೆ ಉಚಿತವಾಗಿ ಊಟ ಕೊಡಲು ಆಗುವುದಿಲ್ಲ.ಸದ್ಯಕ್ಕೆ 5 ತಿಂಗಳ ಬಾಕಿಯನ್ನಾದರೂ‌ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಬಾಕಿ ನೀಡದಿ ದ್ದರೆ ಕ್ಯಾಂಟೀನ್ ಬಂದ್ ಮಾಡುತ್ತೇವೆ’ ಎಂದುಕ್ಯಾಂಟೀನ್ ನಿರ್ವಹಣೆಯ ಗುತ್ತಿಗೆದಾರರು ಬೆಳಿಗ್ಗೆ ಹೇಳಿದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಧ್ಯಪ್ರವೇಶಿಸಿದ ನಂತರ, ಮಹಾನಗರ ಪಾಲಿಕೆ ಆಯುಕ್ತರುಗುತ್ತಿಗೆದಾರ
ರೊಂದಿಗೆ ಚರ್ಚಿಸಿ ಮನವೊಲಿಸಿದರು.ಮೇ 13ರಿಂದ ಉಪಾಹಾರ, ಊಟವನ್ನು ಉಚಿತವಾಗಿ ನೀಡಲು ಗುತ್ತಿಗೆದಾರರು
ಸಮ್ಮತಿಸಿದರು.

‘ರಾಯಚೂರು ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್‌ಗಳಿವೆ. ಉಚಿತ ಆಹಾರ ನೀಡುವಂತೆ ಸ್ಥಳೀಯ ಸಂಸ್ಥೆಗಳಿಂದ ಸೂಚನೆ ಬಂದಿಲ್ಲ. ಹೀಗಾಗಿ ಎಂದಿನಂತೆ ಹಣ ಪಡೆಯುತ್ತಿದ್ದೇವೆ’ ಎಂದು ಕ್ಯಾಂಟೀನ್‌ನ ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದರು.

‘ದೇವದುರ್ಗದ ಒಂದು ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ–ಉಪಾಹಾರ ನೀಡಲಾಗಿದೆ. ಉಳಿದೆಡೆ ಏಕೆ ಈ ಆದೇಶ ಪಾಲನೆಯಾಗಿಲ್ಲ ಎಂಬು ದನ್ನು ಪರಿಶೀಲಿಸುತ್ತೇನೆ’ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್‌
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT