ಶನಿವಾರ, ಜೂನ್ 25, 2022
25 °C

‘ಪಠ್ಯದಿಂದ ಹೆಡಗೇವಾರ್ ಭಾಷಣ ಕೈಬಿಡಲ್ಲ’–ಬಿ.ಸಿ.ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಯಾರೇ ವಿರೋಧ ಮಾಡಿದರೂ ಎಸ್ಸೆಸ್ಸೆಲ್ಸಿ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವ ಕೇಶವ ಬಲಿರಾಮ್‌ ಹೆಡಗೇವಾರ್ ಭಾಷಣ ಹಿಂಪಡೆಯುವುದಿಲ್ಲ’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಕೋಟ್ಯಂತರ ಯುವಕರಿಗೆ ಪ್ರೇರಣೆಯಾಗಿದ್ದರು. ವೈಯಕ್ತಿಕ ಜೀವನಕ್ಕಿಂತ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು. ಸ್ವಾತಂತ್ರ್ಯಕ್ಕಾಗಿ ಅವರು ಹೋರಾಟ ಮಾಡಿದರು. ಜೈಲಿಗೂ ಹೋಗಿದ್ದರು. ಅಂದಿನ ಜಾತಿ, ಅಸ್ಪೃಶ್ಯತೆಯಂತಹ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದರು’ ಎಂದು ಅಭಿಪ್ರಾಯಪಟ್ಟರು.

‘ಆರ್‌ಎಸ್‌ಎಸ್‌ನಂತಹ ಒಂದು ದೊಡ್ಡ ಸಂಘಟನೆಯನ್ನು ಹೆಡಗೇವಾರ್ ಕಟ್ಟಿದರು. ಅವರ ಒಂದು ಭಾಷಣ ವಿರೋಧಿಸುತ್ತಾರೆ ಎಂದರೆ ಇವರು ಎಂತಹ ಸಂಕುಚಿತ ಮನಸ್ಸಿನವರು ಎಂಬುದು ಅರ್ಥವಾಗುತ್ತದೆ. ಪಠ್ಯದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ವಿರೋಧಿಸಲಿ. ಅದನ್ನು ನಾನು ಸ್ವಾಗತಿಸುತ್ತೇನೆ. ಹೆಡಗೇವಾರ್ ವಿಚಾರವನ್ನು ಎಲ್ಲರೂ ತಿಳಿದುಕೊಂಡರೆ ಕಮ್ಯೂನಿಸ್ಟ್ ವಿಚಾರಗಳು ದೇಶದಿಂದ ಎಲ್ಲಿಗೆ ಹೋಗುತ್ತವೊ
ಎನ್ನುವ ಭಯ, ಹೆದರಿಕೆ ಕೆಲವರಲ್ಲಿ ಶುರುವಾಗಿದೆ’ ಎಂದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು