ಬುಧವಾರ, ಅಕ್ಟೋಬರ್ 20, 2021
24 °C

ರಾಜ್ಯದ ನಾಲ್ವರು ಸಾಧಕರಿಗೆ ಎನ್‌ಎಸ್‌ಎಸ್‌ ರಾಷ್ಟ್ರೀಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ನಾಲ್ವರು ಸಾಧಕರು 2019–20ನೇ ಸಾಲಿನ ರಾಷ್ಟ್ರೀಯ ಎನ್‌ಎಸ್‌ಎಸ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ರಾಷ್ಟ್ರೀಯ ಸೇವಾ ಯೋಜನೆ ಮೂಲಕ (ಎನ್‌ಎಸ್‌ಎಸ್‌) ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುವ ಸ್ವಯಂ ಸೇವಕರು ಹಾಗೂ ಸೇವಕಿಯರಿಗೆ ಕೇಂದ್ರ ಸರ್ಕಾರವು ಈ ಪುರಸ್ಕಾರ ನೀಡುತ್ತದೆ.

ರಾಜೀವ್‌ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಬಿ.ವಸಂತ ಶೆಟ್ಟಿ ಅವರಿಗೆ ವಿಶ್ವವಿದ್ಯಾಲಯ ಮಟ್ಟದ ‘ಅತ್ಯುತ್ತಮ ಸಂಯೋಜನಾಧಿಕಾರಿ’ ಗೌರವ ಲಭಿಸಿದೆ. ಧಾರವಾಡದ ಜೆಎಸ್‌ಎಸ್‌ ಬನಶಂಕರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸುರೇಶಪ್ಪ ಕೆ.ಸಜ್ಜನ ಅವರು ಕಾಲೇಜು ಮಟ್ಟದ ‘ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ’ ಪುರಸ್ಕಾರ ಪಡೆದಿದ್ದಾರೆ. 

ಬೆಂಗಳೂರಿನ ಕೆ.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿರೀಶ್‌ ಗೋವರ್ಧನ್‌ ಅವರಿಗೆ ‘ಅತ್ಯುತ್ತಮ ಸ್ವಯಂ ಸೇವಕ’ ಹಾಗೂ ದಕ್ಷಿಣ ಕನ್ನಡದ ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಬಿಂದಿಯಾ ಶೆಟ್ಟಿಯವರಿಗೆ ‘ಅತ್ಯುತ್ತಮ ಸ್ವಯಂ ಸೇವಕಿ’ ಪ್ರಶಸ್ತಿಗಳು ಒಲಿದಿವೆ.

ಇದೇ 24ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು