ಭಾನುವಾರ, ಮೇ 22, 2022
21 °C
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ 

ದಿವ್ಯಾ ಮನೆಯಲ್ಲಿ ತಿಂದ ಕೇಸರಿ ಬಾತ್‌ಗೆ ಇಷ್ಟೊಂದು ನಿಯತ್ತೇ: ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದು ಒಂದು ವಾರ ಕಳೆದರೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಬಂಧಿಸದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಲವು ದಿನಗಳವರೆಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನವಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ದಿವ್ಯಾ ಮನೆಯಲ್ಲಿ ತಿಂದ ಒಂದು ಪ್ಲೇಟ್ ಕೇಸರಿ ಬಾತ್‌ಗೆ ಇಷ್ಟೊಂದು ನಿಯತ್ತೇ’ ಎಂದು ಪ್ರಶ್ನಿಸಿದೆ. 

ಓದಿ... ಪಿಎಸ್ಐ ನೇಮಕಾತಿ ಅಕ್ರಮ: ಆರೋಪಿ ದಿವ್ಯಾ ಹಾಗರಗಿಯಿಂದ ಅಂತರ ಕಾಯ್ದುಕೊಂಡ ಬಿಜೆಪಿ

‘ಪಿಎಸ್ಐ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧವೇ ಇಲ್ಲವಂತೆ!, ಆಕೆ ಬಿಜೆಪಿಯ ಪದಾಧಿಕಾರಿ ಎಂಬುದು ಸುಳ್ಳೇ? ಗೃಹಸಚಿವರೊಂದಿಗೆ ಆಪ್ತ ಒಡನಾಟ ಹೊಂದಿರುವುದು ಸುಳ್ಳೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಬಿಜೆಪಿಗೂ, ದಿವ್ಯಾಗೂ ಸಂಬಂಧವಿಲ್ಲವೆಂದರೆ ಸಚಿವರುಗಳೊಂದಿಗೆ, ಮಾಜಿ ಸಿಎಂನೊಂದಿಗೆ, ಗೃಹಸಚಿವರೊಂದಿಗೆ ಆಕೆಗಿರುವ ಸಂಬಂಧವೇನು? ಈ ಕುರಿತು ಬಿಜೆಪಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 

ಓದಿ... ನನ್ನನ್ನು ನೋಡಿದ ಕೂಡಲೇ ಕೆಲವರಿಗೆ ಖುಷಿಯಾಗುತ್ತದೆ: ರಮೇಶ್‌ಗೆ ಡಿಕೆಶಿ ಟಾಂಗ್

ಓದಿ... ಸಿದ್ದರಾಮಯ್ಯ ಅನೈತಿಕ ರಾಜಕಾರಣದ ಅಸಲಿ ಅಪ್ಪ: ಮತ್ತೆ ಗುಡುಗಿದ ಕುಮಾರಸ್ವಾಮಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು