ಮಂಗಳವಾರ, ಜೂನ್ 22, 2021
24 °C

ಕೊರೊನಾ ನಿಯಮ ಉಲ್ಲಂಘನೆ: ₹2.85 ಕೋಟಿ ದಂಡ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಮಾಸ್ಕ್‌ ಧರಿಸದವರ ವಿರುದ್ಧ ಏ.1ರಿಂದ ಮೇ 4ರವರೆಗೆ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಒಟ್ಟು ₹2.85 ಕೋಟಿ ದಂಡ ಸಂಗ್ರಹವಾಗಿದೆ. 

ಈ ಅವಧಿಯಲ್ಲಿ ಮಾಸ್ಕ್‌ ಧರಿಸದವರ ವಿರುದ್ಧ ಒಟ್ಟು 1,07,272 ಪ್ರಕರಣಗಳು ಹಾಗೂ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿದವರ ವಿರುದ್ಧ 11,107 ಪ್ರಕರಣ ಸೇರಿದಂತೆ ಒಟ್ಟು 1,18,379 ಪ್ರಕರಣಗಳು ದಾಖಲಾಗಿವೆ.

ಮಾಸ್ಕ್‌ ಧರಿಸದವರಿಂದ ₹2,59,50,013 ಹಾಗೂ ಅಂತರ ಕಾಯ್ದುಕೊಳ್ಳದವರಿಂದ ₹25,75,283 ಸೇರಿದಂತೆ ಒಟ್ಟು ₹2,85,25,297 ದಂಡ ಸಂಗ್ರಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

577 ವಾಹನ ಜಪ್ತಿ: ಕೊರೊನಾ ಕರ್ಫ್ಯೂ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದ 577 ವಾಹನಗಳನ್ನು ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ. 546 ದ್ವಿಚಕ್ರ ವಾಹನ, 16 ತ್ರಿಚಕ್ರ ವಾಹನ, 15 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎನ್‌ಡಿಎಂಎ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು