ಸೋಮವಾರ, ನವೆಂಬರ್ 23, 2020
24 °C

ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಗೆಲ್ಲಲು ಇವೆ ಹೇರಳ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ನ್ಯೂಸ್‌ ಕ್ವಿಜ್‌

ಬೆಂಗಳೂರು: ಕನ್ನಡದ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ ಇದೇ ತಿಂಗಳ 15ರಂದು ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಆರಂಭಿಸಲಿದೆ. ಡಿಸೆಂಬರ್‌ 27ರವರೆಗೆ ನಡೆಯುವ ಈ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಂಪರ್‌ ಬಹುಮಾನವಾಗಿ ಮಾರುತಿ ಸ್ವಿಫ್ಟ್‌ ಕಾರು ಮತ್ತು ಇತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ.

ಓದುಗರಿಗೆ ಈ ಬಹುಮಾನಗಳ ಜೊತೆಗೆ, ಪ್ರತಿ ವಾರ ವಿಶೇಷ ಬಹುಮಾನ, ದಿನನಿತ್ಯ 20 ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.

ಕ್ವಿಜ್‌ನಲ್ಲಿ ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ. ಸೋಮವಾರದಿಂದ ಶನಿವಾರದವರೆಗೆ ಪತ್ರಿಕೆಯಲ್ಲಿ ಪ್ರಕಟವಾಗುವ ಎರಡು ಸುಲಭ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪ್ರತಿ ಪ್ರಶ್ನೆಗೆ ಎರಡು ಉತ್ತರಗಳ ಆಯ್ಕೆ ನೀಡಲಾಗುತ್ತದೆ. ಭಾನುವಾರಗಳಂದು ಮಾತ್ರ ಐದು ಪ್ರಶ್ನೆಗಳು ಇರುತ್ತವೆ. ಆಯಾ ದಿನ, ಸರಿಯಾದ ಆಯ್ಕೆಗಳನ್ನು ಮೊಬೈಲ್‌ನಲ್ಲಿ ಟೈಪ್‌ ಮಾಡಿ 92460 20020 ನಂಬರ್‌ಗೆ, ರಾತ್ರಿ ಎಂಟು ಗಂಟೆಯ ಒಳಗೆ ಎಸ್‌ಎಂಎಸ್‌ ಕಳುಹಿಸಬೇಕು. ಉದಾಹರಣೆಗೆ ಮೊದಲ ಪ್ರಶ್ನೆಗೆ ನಿಮ್ಮ ಉತ್ತರ ’ಎ‘ ಎಂದಾದರೆ PVQ1A ಎಂದು, ಎರಡನೇ ಪ್ರಶ್ನೆಗೆ ‘ಬಿ’ ಎಂದಾದರೆ PVQ2B ಎಂದು ಸಂದೇಶ ಕಳುಹಿಸಬೇಕು.

ಬಂಪರ್‌ ಬಹುಮಾನ ಗೆಲ್ಲಲು ಭಾನುವಾರ ಪ್ರಕಟವಾಗುವ ಐದು ಕ್ವಿಜ್‌ಗಳ ಜೊತೆಗೆ ಇತರೆ 30 ದಿನಗಳ ಕ್ವಿಜ್‌ಗಳಿಗೂ ಉತ್ತರ ಕಳುಹಿಸಿರಬೇಕು. ವಾಚುಗಳನ್ನು ಗೆಲ್ಲಲು ನಾಲ್ಕು ಭಾನುವಾರದ ಕ್ವಿಜ್‌ಗಳ ಜೊತೆಗೆ ಇತರೆ 24 ದಿನಗಳ ಪ್ರಶ್ನೆಗಳಿಗೆ ಉತ್ತರ ಕಳುಹಿಸಿರಬೇಕು. ವಾಟರ್‌ ಪ್ಯೂರಿಫೈಯರ್‌ ಬಹುಮಾನಕ್ಕೆ ಮೂರು ಭಾನುವಾರದ ಕ್ವಿಜ್‌ಗಳ ಜೊತೆಗೆ 18 ದಿನಗಳ ಪ್ರಶ್ನೆಗಳಿಗೆ ಉತ್ತರಿಸಿರಬೇಕು. ದಿನನಿತ್ಯದ ಬಹುಮಾನ ವಿಜೇತನ್ನು ಅದೃಷ್ಟದ ‘ಡ್ರಾ’ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಮುದ್ರಣ ಮಾಧ್ಯಮ: ವಿಶ್ವಾಸವೇ ಜೀವಾಳ

ನಾನು ಯಾವಾಗಲೂ ಮುದ್ರಣ ಮಾಧ್ಯಮವನ್ನೇ ನಂಬುವುದು. ಬೇರೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುವಾಗ ಅದು ಸತ್ಯವೋ, ಸುಳ್ಳೋ ಎಂದು ಪರಿಶೀಲಿಸುವುದಿಲ್ಲ. ಪತ್ರಿಕೆಗಳನ್ನು ಪುರಾವೆಗಳನ್ನು ಇಟ್ಟುಕೊಂಡೇ ಸುದ್ದಿ ಮಾಡುತ್ತವೆ. ಶಾಲಾ–ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಓದಿ ಎಂದೇ ಹೇಳುತ್ತೇವೆಯೇ ವಿನಾ ಟಿವಿ ನೋಡಿ ಎನ್ನುವುದಿಲ್ಲ. ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಾಗುವುದಲ್ಲದೆ, ಓದುವ ಕೌಶಲವೂ ಬೆಳೆಯುತ್ತದೆ. ವಾಕ್ಯ ರಚನೆ ಹೇಗೆ ಮಾಡಬೇಕು ಎಂಬುದೂ ತಿಳಿಯುತ್ತದೆ.

- ಡಿ.ಕೆ. ಮೋಹನ್, ಕೇಂಬ್ರಿಜ್‌ ಸಮೂಹ ಸಂಸ್ಥೆ ಮುಖ್ಯಸ್ಥ

ನಂಬಲರ್ಹವಾದ ಮಾಧ್ಯಮವೆಂದರೆ ಪತ್ರಿಕೆಗಳೇ. ಯಾವುದೇ ಮಾಹಿತಿ ಕೊಡುವಾಗ ಕೂಲಂಕಷವಾಗಿ ಪರಿಶೀಲಿಸಿ ಪ್ರಕಟ ಮಾಡುತ್ತಾರೆ. ಪತ್ರಿಕೆಗಳು ನೂರಾರು ವರ್ಷಗಳಿಂದ ಬರುತ್ತಿರುವುದರಿಂದ ಅವುಗಳಲ್ಲಿ ವೃತ್ತಿಪರತೆ ಹೆಚ್ಚಾಗಿರುತ್ತದೆ. ತಪ್ಪು ಅಥವಾ ಸುಳ್ಳು ಸುದ್ದಿ ಪ್ರಕಟವಾದರೆ ಪತ್ರಿಕೆಯ ಘನತೆಗೆ ಕುಂದುಂಟಾಗುತ್ತದೆ ಎಂಬ ಕಾರಣದಿಂದ ವಿಶ್ವಾಸಾರ್ಹವಾದ ಸುದ್ದಿಗಳನ್ನಷ್ಟೇ ಪ್ರಕಟಿಸುತ್ತಾರೆ. ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗಿಂತ ಪತ್ರಿಕೆಗಳಲ್ಲಿ ಹೆಚ್ಚು ಮಾಹಿತಿ, ವಿವರಗಳಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಪತ್ರಿಕೆಗಳನ್ನು ಹೆಚ್ಚು ಓದಬೇಕು.

-ಡಾ. ಗೋವಿಂದ ಆರ್. ಕಡಂಬಿ, ಹಂಗಾಮಿ ಕುಲಪತಿ, ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ

ಸಾಮಾಜಿಕ ಮಾಧ್ಯಮಗಳು ಸಮೂಹ ಮಾಧ್ಯಮವಾಗಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಕಲ್ಪಿಸಿದೆ. ಆದರೆ, ಆ ವೇದಿಕೆಗೆ ವಿಷಯದ ಗಂಭೀರತೆ ಮತ್ತು ಸತ್ಯತೆಯ ಅವಶ್ಯಕತೆಯ ಕೊರತೆ ಇರುವುದು ಸದ್ಯಕ್ಕೆ ಗೋಚರಿಸುತ್ತಿದೆ. ಅದನ್ನು ನಿವಾರಿಸಲು ಆಧುನಿಕ ತಾಂತ್ರಿಕತೆ ಬಳಕೆಗೆಯಾಗುತ್ತಿದ್ದರೂ ಮುದ್ರಣ ಮಾಧ್ಯಮದ ಅನುಭವಗಳನ್ನು ಕಡೆಗಣಿಸಲು ಸಾದ್ಯವಿಲ್ಲ. ಮುದ್ರಣ ಮಾಧ್ಯಮ ಇಂದಿಗೂ ಒಂದು ವಿಷಯದ ಸತ್ಯಾಸತ್ಯತೆಯ ಪರಾಮರ್ಶೆ ಮಾಡುವಲ್ಲಿ ಮುಂಚೂಣಿ. ಈ ಸಂದರ್ಭದಲ್ಲಿ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿ, ಅದರ ಹಿನ್ನಲೆ ಮತ್ತು ವಸ್ತು-ನಿಷ್ಠ ವರದಿ ನೀಡುವಲ್ಲಿ ಮುದ್ರಣವೇ ಮುಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಪ್ರಸ್ತುತ ಅವಕಾಶವೇ ಇಲ್ಲ.

-ಬಿ.ಆರ್.ಸುಪ್ರೀತ್, ಉಳ್ಳಾಲದ ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು