ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೊಚ್ಚಿ ಹೋದ ಸೇತುವೆ

ಬಸವಕಲ್ಯಾಣದಲ್ಲಿ 73 ಮಿ.ಮೀ. ಮಳೆ ದಾಖಲು
Last Updated 17 ಅಕ್ಟೋಬರ್ 2021, 17:54 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗಿನ ಜಾವ ಮಳೆಯಾಯಿತು. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಹುಲಸೂರ ತಾಲ್ಲೂಕಿನ ಜಮಖಂಡಿ ಸಮೀಪದ ಹಳ್ಳದ ಸೇತುವೆ ಕೊಚ್ಚಿಕೊಂಡು ಹೋಗಿದೆ.

ರಾಷ್ಟ್ರೀಯ ಹೆದ್ದಾರಿ–752ರ ಹುಲಸೂರ–ಲಾತೂರ್‌ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಹಳ್ಳದ ದಂಡೆ ಮೇಲಿನ ಪಪ್ಪಾಯಿ ಬೆಳೆ ಹಾಳಾಗಿದೆ.

ಜಮಖಂಡಿ ಬಳಿಯಿರುವ ಹಳೆಯದಾದ ಸೇತುವೆ ಶಿಥಿಲಗೊಂಡ ಕಾರಣ ಪಕ್ಕದಲ್ಲಿ ಪೈಪ್‌ ಅಳವಡಿಸಿ ಇನ್ನೊಂದು ಚಿಕ್ಕ ಸೇತುವೆ ನಿರ್ಮಿಸಲಾಗಿತ್ತು. ಈಗ ಅದೇ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.

ಬಸವಕಲ್ಯಾಣದಲ್ಲಿ 73 ಮಿ.ಮೀ. ನಾರಾಯಣಪುರದಲ್ಲಿ 68.5 ಮಿ.ಮೀ ಮತ್ತು ಹುಲಸೂರಿನಲ್ಲಿ 68.5 ಮಿ.ಮೀ,
ಮಳೆ ದಾಖಲಾಗಿದೆ.

ಕರಾವಳಿಯಲ್ಲಿ ಉತ್ತಮ ಮಳೆ (ಮಂಗಳೂರು ವರದಿ): ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನಲ್ಲಿ ಉತ್ತ
ಮ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ
ಯಿಂದ ಭಾನುವಾರ ಬೆಳಗಿನವರೆಗೂ ನಿರಂತರ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಪೂರ್ಣ ಹಾನಿಯಾಗಿವೆ. ಉಡುಪಿ ಜಿಲ್ಲೆಯಲ್ಲೂ ಹಲವೆಡೆ ಮನೆಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ, ಕಡೂರು ಭಾಗದಲ್ಲಿ ಭಾನುವಾರ ಮಧ್ಯಾಹ್ನ ಬಿರುಸಾಗಿ ಮಳೆ ಸುರಿದಿದೆ. ಮಲೆನಾಡು ಭಾಗದ ಹಳ್ಳ, ಝರಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT