ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

178 ಮಠಗಳಿಗೆ ₹108 ಕೋಟಿ ಅನುದಾನ: ಮುಜರಾಯಿ ಇಲಾಖೆ

Last Updated 17 ಆಗಸ್ಟ್ 2022, 18:37 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಸಮುದಾಯಗಳ 178 ಮಠಗಳಿಗೆ ₹ 108.24 ಕೋಟಿ, 59 ದೇವಸ್ಥಾನಗಳಿಗೆ ₹ 21.35 ಕೋಟಿ, 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ ₹ 13 ಕೋಟಿ ಸೇರಿ ಒಟ್ಟು ₹ 142.59 ಕೋಟಿ ಅನುದಾನ ಬಿಡುಗಡೆ ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.

ಈ ಪೈಕಿ, ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಠ, ದಾವಣಗೆರೆಯ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ಗೆ ತಲಾ ₹ 5 ಕೋಟಿ, ಉಡುಪಿ–ಕುಂಜಾರುಗಿರಿಯ ದುರ್ಗಾ ಬೆಟ್ಟದಲ್ಲಿರುವ ‘ಮಧ್ವವನ’ ಅಭಿವೃದ್ಧಿಗೆ, ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ₹3 ಕೋಟಿ, ತಿಪಟೂರಿನ ಷಡಕ್ಷರ ಮಠ, ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲ್ಲೂಕಿನ ಹಾವೇರಿ ಮಠ, ಅಥಣಿಯ ಶಿವಯೋಗಿ ಮುರುಘೇಂದ್ರ ಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ₹ 2 ಕೋಟಿ, ದೇವಸ್ಥಾನಗಳ ಪೈಕಿ ಬನವಾಸಿಯ ಮಧುಕೇಶ್ವರ ದೇಗುಲ ರಥ ನಿರ್ಮಾಣಕ್ಕೆ ₹ 3 ಕೋಟಿ ಒದಗಿಸಲಾಗಿದೆ.

‘ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೆಚ್ಚು ವರಿ ಅನುದಾನ ಒದಗಿಸಿ ಆದೇಶಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT