ಭಾನುವಾರ, ಫೆಬ್ರವರಿ 5, 2023
20 °C

ಸಚಿವರೊಬ್ಬರ ‘ಸಿ.ಡಿ’ ಬಯಲು; ಸಂತ್ರಸ್ತೆ ಪರ ಕಬ್ಬನ್ ಪಾರ್ಕ್‌ ಠಾಣೆಗೆ ದೂರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರ ಜೊತೆ ಸಲುಗೆ ಬೆಳೆಸಿ ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದ ಸಚಿವರೊಬ್ಬರ ‘ಸಿ.ಡಿ’ ದೃಶ್ಯಗಳು ಬಹಿರಂಗವಾಗಿದ್ದು, ಈ ಸಂಬಂಧ ದೂರು ನೀಡಲು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಅವರು ನಗರದ ಕಬ್ಬನ್ ಪಾರ್ಕ ಠಾಣೆಗೆ ಬಂದಿದ್ದಾರೆ.

ಇದೇ ಪ್ರಕರಣ ಸಂಬಂಧ ದೂರು ನೀಡಲು ದಿನೇಶ್, ಕಮಿಷನರ್ ಕಮಲ್ ಪಂತ್ ಅವರ ಕಚೇರಿಗೆ ಹೋಗಿದ್ದರು. ಸಂಬಂಧಪಟ್ಟ ಠಾಣೆಗೆ ಹೋಗಿ ದೂರು ನೀಡುವಂತೆ ಕಮಿಷನರ್ ಹೇಳಿದ್ದರು. ಅದರಂತೆ ದಿನೇಶ್, ಠಾಣೆಗೆ ಬಂದು ದೂರು ಸಲ್ಲಿಕೆ ಪ್ರಕ್ರಿಯೆ ನಡೆಸುತ್ತಿದ್ದಾರೆ.
‘ಕೆಪಿಟಿಸಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಸಚಿವ, ಯುವತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು. ವೈಯಕ್ತಿಕ ಫೋಟೊ ಹಾಗೂ ವಿಡಿಯೊ ಪಡೆದುಕೊಂಡು ಅಶ್ಲೀಲವಾಗಿ ಮಾತನಾಡಿದ್ದರು. ಕೊಠಡಿಯೊಂದರಲ್ಲಿ ಯುವತಿ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ’ ಎಂದು ಗೊತ್ತಾಗಿದೆ.

ಸಂತ್ರಸ್ತೆ ಯಾರು?

ಕಬ್ಬನ್‌ ಪಾರ್ಕ್ ಠಾಣೆಗೆ ಬಂದಿರುವ ದಿನೇಶ್‌, ದೂರಿನ ಪ್ರತಿಯನ್ನು ಇನ್‌ಸ್ಪೆಕ್ಟರ್ ಅವರಿಗೆ ನೀಡಿದ್ದಾರೆ. ಅದರ ಪರಿಶೀಲನೆ ನಡೆಯುತ್ತಿದೆ. ಯುವತಿ ಯಾರು ? ವಿಡಿಯೊ ಹಾಗೂ ಫೋಟೊಗಳು ನಿಮಗೆ ಎಲ್ಲಿ ಸಿಕ್ಕವು? ಎಂಬ ಹಲವು ಮಾಹಿತಿಗಳನ್ನು ಇನ್‌ಸ್ಪೆಕ್ಟರ್‌ ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ಮಾಹಿತಿ ಪಡೆದು ಎಫ್‌ಐಆರ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು